ದೆಹಲಿ: ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿಯೇ ನೂತನ ಕೃಷಿ ಕಾನೂನನ್ನು ರದ್ದುಗೊಳಿಸುವಂತೆ ರೈತರು ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
Advertisement
ಕೃಷಿ ಕಾನೂನನ್ನು ರದ್ದು ಪಡಿಸುವಂತೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ದೆಹಲಿ ಪೊಲೀಸರು ಬುಧವಾರ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ವಿವಿಧ ಪ್ರದೇಶಗಳಿಂದ ಪ್ರತಿಭಟನೆ ನಡೆಸಲು ರೈತರು ದೆಹಲಿಗೆ ಆಗಮಿಸುತ್ತಿದ್ದು, ಪೊಲೀಸರು ಸಿಂಘು ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
Advertisement
Advertisement
ಜಂತರ್ ಮಂತರ್ನಲ್ಲಿ ಸಮುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಪ್ರತಿಭಟನೆಯಲ್ಲಿ 200 ಮಂದಿ ರೈತರು ಪಾಲ್ಗೊಳ್ಳಲಿದ್ದು, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ(ಕೆಎಂಎಸ್ಸಿ)ಯ ಆರು ಮಂದಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೇ ಕೋವಿಡ್-19 ನಿಯಮಗಳ ಅನುಸಾರ ರೈತರಿಗೆ ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ.
Advertisement
Morning visuals from Jantar Mantar
Farmers have been permitted to protest here with a condition that their numbers won’t exceed 200 for SKM & 6 persons for Kisan Mazdoor Sangharsh Committee b/w 11 am-5 pm daily, on being assured in writing that they would remain peaceful. pic.twitter.com/SrGkxamZKY
— ANI (@ANI) July 22, 2021
ಬುಧವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಬಸ್ ಮೂಲಕ ಆಗಮಿಸಲಿರುವ ರೈತರನ್ನು ಸಿಂಘು ಗಡಿಯಿಂದ ಜಂತರ್ ಮಂತರ್ಗೆ ದೆಹಲಿ ಪೊಲೀಸರು ಕರೆದೊಯ್ಯಲಿದ್ದಾರೆ. ಅದರಲ್ಲಿಯೂ ಗುರುತಿನ ಚೀಟಿ ಹೊಂದಿರುವ ರೈತರಿಗೆ ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಪ್ರತಿಭಟನೆಯ ನಂತರ ಸಂಜೆ 5 ಗಂಟೆಗೆ ರೈತರಿಗೆ ಪೊಲೀಸರು ಬಸ್ ಹತ್ತಿಸಲಿದ್ದಾರೆ. ಇದನ್ನೂ ಓದಿ:ಸಮ್ಮಿಶ್ರ ಸರ್ಕಾರ ಪತನಕ್ಕೆ ಪೆಗಾಸಸ್ ಕಾರಣ: ಪರಮೇಶ್ವರ್
Delhi: Heavy security deployment at Tikri Border in view of farmers’ protest against at Jantar Mantar amid monsoon session of Parliament pic.twitter.com/j3U71Z5w1s
— ANI (@ANI) July 22, 2021