ಮುಂಬೈ: ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ತನ್ನ ದುಬಾರಿ ಕಾರನ್ನು ಮಾರಾಟ ಮಾಡಿ ‘ಆಕ್ಸಿಜನ್ ಮ್ಯಾನ್’ ಎಂದು ಬಿರುದು ಪಡೆದುಕೊಳ್ಳುವ ಮೂಲಕವಾಗಿ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ.
Shanawaz ‘Oxygen Man’ Of Mumbai Sold His Rs 22 Lakh SUV to Help COVID Patients With Oxygen Cylinders
With The Money He Got After Selling His Ford Endeavor, Shahnawaz Bought 160 Oxygen Cylinders To Provide To The Needy.
We Need Many Shahnawaz Today.
Kudos To Him For His Service pic.twitter.com/kvL9loIKtR
— ???? ਹਤਿੰਦਰ ਸਿੰਘ ???? (@hatindersinghr1) April 22, 2021
Advertisement
ಶೆಹನಾಜ್ ಶೇಖ್ ಅವರು ತಮ್ಮ ದುಬಾರಿ ಕಾರ್ ಮಾರಿ ಕೃತಕ ಆಮ್ಲಜನಕವನ್ನು ಪೂರೈಕೆ ಮಾಡುವ ಮೂಲಕವಾಗಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಎಂದು 22 ಲಕ್ಷದ ಕಾರನ್ನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರಾಟ ಮಾಡಿದ್ದಾರೆ. ಈ ಹಣದಿಂದ 160 ಆಮ್ಲಜನಕ ಸಿಲಿಂಡರ್ಗಳನ್ನು ಖರೀದಿಸಿದ್ದಾರೆ.
Advertisement
#CovidIndia,#OxygenShortage,#wecantbreath#CoWIN
This man from Mumbai has sold his Rs.22 Lakh worth Ford Endeavour car to organize Oxygen Cylinders for Covid patients.
Popularly known as ‘Oxygen Man’ Shahnawaz shiekh is working in locality to deliver Oxygen on phone call.
Salute pic.twitter.com/6Nj3op9C3G
— ABHISHEK KUMAR (@tweet_abhi1989) April 22, 2021
Advertisement
ಶೆಹನಾಜ್ ಅವರ ಈ ಸಾಮಾಜಿಕ ಕಳಕಳಿಯ ಹಿಂದೆ ಕಣ್ಣೀರಿನ ಕಥೆ ಇದೆ. ಕಳೆದ ವರ್ಷ ಶೆಹನಾಜ್ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾದಲ್ಲಿಯೇ ಪ್ರಾಣಬಿಟ್ಟಿದ್ದರು. ಈ ಘಟನೆ ಬಳಿಕ ಜೀವದ ಮಹತ್ವವನ್ನ ಅರಿತ ಶೆಹಜಾನ್ ಮುಂಬೈನಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಅಗತ್ಯ ಇರುವವರಿಗೆ ಶೆಹಜಾನ್ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಮ್ ತೆರೆದಿದ್ದಾರೆ. ಸಹಾಯ ಮಾಡುತ್ತಿರುವ ಶೆಹನಾಜ್ ಅವರ ಬಳಿ ಇದ್ದ ಹಣ ಖಾಲಿಯಾಗಿದೆ. ಹೀಗಾಗಿ ತನ್ನ ಕಾರು ಮಾರಿ ಹಣ ಹೊಂದಿಸಿ ಆಕ್ಸಿಜನ್ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.