ಮುಂಬೈ: ವಿಚಾರಣೆಗೆ ಹಾಜರಾಗಿದ್ದ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ತಿಳಿಸಿದೆ. ಆರಂಭದಲ್ಲಿ ದೀಪಿಕಾ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ ಖಾಸಗಿ ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ಈ ಬಗ್ಗೆ ಎನ್ಸಿಬಿ ಅಧಿಕೃತ ಹೇಳಿಕೆಯನ್ನ ನೀಡಿದೆ.
Advertisement
ಇತ್ತ ವಿಚಾರಣೆಗೆ ಹಾಜರಾಗಿದ್ದ ಕರೀಷ್ಮಾ ಕಪೂರ್, ಜಯಾ ಸಾಹಾ ಮತ್ತು ಸಿಮೋನ್ ಖಂಬಟ್ಟಾರ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ಸಿಬಿ ಸ್ಪಷ್ಟಪಡಿಸಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ನಟಿಯರಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಮುನ್ನ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಸಂಭಾಷಣೆಯ ಮಾಹಿತಿ ಲೀಕ್ ಆಗಿತ್ತು. ರಕುಲ್ ಪ್ರೀತ್ ಸಿಂಗ್ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಇನ್ನುಳಿದ ಮೂವರು ಶನಿವಾರ ಎನ್ಸಿಬಿ ವಿಚಾರಣೆ ಎದುರಿಸಿದ್ದಾರೆ.
Advertisement
Advertisement
ವಿಚಾರಣೆ ವೇಳೆ ದೀಪಿಕಾ ಡ್ರಗ್ಸ್ ಚಾಟ್ ನಡೆಸಿರೋದು ಸತ್ಯ ಎಂದು ಒಪ್ಪಿಕೊಂಡಿದ್ದು, ಅಧಿಕಾರಿಗಳ ಇನ್ನುಳಿದ ಪ್ರಶ್ನೆಗಳಿಗೆ ಸಮರ್ಪಲ ಉತ್ತರ ನೀಡಿಲ್ಲ ಎನ್ನಲಾಗಿದೆ. ಇತ್ತ ಶ್ರದ್ಧಾ ಕಪೂರ್ ಸಹ ವಾಟ್ಸಪ್ ನಲ್ಲಿ ನಡೆಸಿರುವ ಸಂಭಾಷಣೆ ಒಪ್ಪಿಕೊಂಡಿದ್ದು, ಡ್ರಗ್ಸ್ ಸೇವನೆಯ ಆರೋಪವನ್ನ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಇತ್ತ ಸಾರಾ ಅಲಿಖಾನ್ ಸಹ ಕೇದಾರನಾಥ್ ಸಿನಿಮಾದಿಂದ ಸುಶಾಂತ್ ಹತ್ತಿರವಾಗಿದ್ದರಿಂದ ಆತನ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದೇನೆ. ಸ್ಮೋಕ್ ಮಾಡಿದ್ದೇನೆಯೇ ಹೊರತು ಡ್ರಗ್ಸ್ ಸೇವಿಸಿಲ್ಲ ಎಂದು ಸಾರಾ ಹೇಳಿಕೆ ದಾಖಲಿಸಿದ್ದಾರೆ ಅಂತ ಮಾಧ್ಯಮಗಳು ಪ್ರಕಟಿಸಿವೆ. ಇದನ್ನೂ ಓದಿ: ಡ್ರಗ್ಸ್ ಸೇವಿಸಲ್ಲ, ಸ್ಮೋಕ್ ಮಾಡ್ತೀನಿ: ಸಾರಾ ಅಲಿ ಖಾನ್
Advertisement
ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸ್ನೇಹ, ಥೈಲ್ಯಾಂಡ್ ಪ್ರವಾಸ ಮತ್ತು ಡ್ರಗ್ಸ್ ಚಾಟ್, ಸೇವನೆ ಕುರಿತಾಗಿ ಶ್ರದ್ಧಾ ಕಪೂರ್ ಅವರನ್ನ ಪ್ರಶ್ನೆ ಮಾಡಲಾಗಿದೆ. ವಿಚಾರಣೆ ವೇಳೆ ಡ್ರಗ್ಸ್ ಸೇವನೆಯ ಆರೋಪವನ್ನ ಶ್ರದ್ಧಾ ತಳ್ಳಿ ಹಾಕಿದ್ದಾರೆ. ಸಿಬಿಡಿ ಆಯಿಲ್ ಗೆ ಸಂಬಂಧಿಸಿದಂತೆ ಜಯಾ ಸಾಹಾ ಜೊತೆ ತಾವು ಚಾಟ್ ನಡೆಸಿರೋದನ್ನ ಶ್ರದ್ಧಾ ಒಪ್ಪಿಕೊಂಡಿದ್ದಾರೆ. ಚಿಚೋರೆ ಸಿನಿಮಾಗಾಗಿ ಸುಶಾಂತ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆದ್ರೆ ಶ್ರದ್ಧಾ ಕಪೂರ್ ನೀಡಿರುವ ಉತ್ತರಗಳಲ್ಲಿ ತನಿಖಾಧಿಕಾರಿಗಳಿಗೆ ಸ್ಪಷ್ಟತೆ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆರು ಗಂಟೆಯ ವಿಚಾರಣೆ ಎದುರಿಸಿದ ಶ್ರದ್ಧಾ ಕಪೂರ್ ಹೊರ ಬಂದಿದ್ದಾರೆ. ಇದನ್ನೂ ಓದಿ: ಐದೂವರೆ ಗಂಟೆ ದೀಪಿಕಾಗೆ ಎನ್ಸಿಬಿ ಡ್ರಿಲ್-ಡ್ರಗ್ಸ್ ವ್ಯೂಹದಿಂದ ಹೊರ ಬರ್ತಾರಾ?
ಕ್ಷಿತಿಜ್ ಪ್ರಸಾದ್ ಅರೆಸ್ಟ್: ಇಂದು ವಿಚಾರಣೆಗೆ ಹಾಜರಾಗಿದ್ದ ಧರ್ಮ ಪ್ರೊಡೆಕ್ಷನ್ ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್ ಕ್ಷಿತಿಜ್ ಪ್ರಸಾದ್ ಎಂಬವರನ್ನ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖೆ ಸಹಕರಿಸದ ಹಿನ್ನೆಲೆ ಕ್ಷಿತಿಜ್ ಬಂಧನವಾಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ- ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ
Mobile phones of Deepika Padukone, Shraddha Kapoor, Sara Ali Khan, Karishma Prakash, Rakul Preet Singh, Simone Khambatta and Jaya Shah have been seized: Narcotics Control Bureau (NCB) official. #SushantSingRajputCase
— ANI (@ANI) September 27, 2020