Connect with us

Cinema

‘ದಿ ವಾಲ್’ ನನ್ನ ಫೇವರೆಟ್ ಕ್ರಿಕೆಟರ್ ಎಂದ್ರು ಪೂಜಾ ಹೆಗ್ಡೆ

Published

on

ಮುಂಬೈ: ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಟಾಲಿವುಡ್, ಬಾಲಿವುಡ್‍ಗಳಲ್ಲಿ ಸತತವಾಗಿ ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಸಾಕಷ್ಟು ಬ್ಯುಸಿಯಾಗಿದ್ದು, ಸದ್ಯ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಕಳೆದ ವರ್ಷ ನಟಿ ಪೂಜಾ ಹೆಗ್ಡೆ, ‘ಅರವಿಂದ ಸಮೇತ’, ‘ಮಹರ್ಷಿ’, ‘ಗದ್ದಲಕೊಂಡ ಗಣೇಶ್’ ಸಿನಿಮಾಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದಿದ್ದರು. ಅಲ್ಲದೇ 2020ರ ಆರಂಭದಲ್ಲಿ ಬಿಡುಗಡೆಯಾಗಿದ್ದ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಕೂಡ ಪೂಜಾ ಹೆಗ್ಡೆಗೆ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಸದ್ಯ ಪೂಜಾ ಹೆಗ್ಡೆ, ನಟ ಪ್ರಭಾಸ್ ನಟನೆಯ ರಾಧಾಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್‍ಡೌನ್ ಕಾರಣದಿಂದ ಸಿನಿಮಾ ಶೂಟಿಂಗ್ ಬ್ರೇಕ್ ಬಿದ್ದಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ್ದ ಪೂಜಾ ಹೆಗ್ಡೆ ಸಾಕಷ್ಟು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದರು.

ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಪೂಜಾ ಹೆಗ್ಡೆ, ‘ದಿ ವಾಲ್’ ರಾಹುಲ್ ದ್ರಾವಿಡ್ ಅವರಿಗೆ ನಾನು ಅಭಿಮಾನಿ. ಎಷ್ಟೇ ಆಟಗಾರರು ಬಂದರೂ ರಾಹುಲ್ ಅವರಿಗೆ ಯಾರು ಸಮ ಎನಿಸುವುದಿಲ್ಲ. ಸದ್ಯದ ಆಟಗಾರರಲ್ಲಿ ನನಗೆ ಧೋನಿ, ಕೆಎಲ್ ರಾಹುಲ್ ಫೇವರೆಟ್. ಎಷ್ಟು ಬ್ಯುಸಿ ಇದ್ದರೂ, ತಪ್ಪದೇ ಕ್ರಿಕೆಟ್ ನೋಡುತ್ತಿದೆ. ಅದು ಸಾಧ್ಯವಾಗದಿದ್ದರೆ ಸ್ಕೋರ್ ಎಷ್ಟು ಎಂದು ತಿಳಿದುಕೊಳ್ಳುತ್ತಿದೆ. ಕ್ರಿಕೆಟ್ ಎಂದರೇ ನನಗೆ ಅಷ್ಟು ಇಷ್ಟ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

ಹಲವು ಮಾಜಿ ಕ್ರಿಕೆಟ್ ದಿಗ್ಗಜರು, ಸ್ಟಾರ್ ನಟ-ನಟಿಯರು ರಾಹುಲ್ ದ್ರಾವಿಡ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪಾಕ್ ಮಾಜಿ ಆಟಗಾರ ರಷೀದ್ ಲತೀಫ್ ಕೂಡ ಮೆಚ್ಚುಗೆ ಸೂಚಿಸಿದ್ದರು. ದ್ರಾವಿಡ್ ಕ್ರಿಕೆಟ್‍ಗಾಗಿಯೇ ಜನಿಸಿದ್ದರು. ತಾವು ಆಡಿದ ಆಟಗಾರರಲ್ಲಿ ಹೆಚ್ಚು ಬದ್ಧತೆ ಹೊಂದಿದ್ದ ಆಟಗಾರ ದ್ರಾವಿಡ್ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದರು. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಪರ 164 ಟೆಸ್ಟ್ ಗಳ್ಲಲಿ 13,288 ರನ್, 344 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 10,899 ಹಾಗೂ ಒಂದು ಟಿ20 ಪಂದ್ಯದಲ್ಲಿ 31 ರನ್ ಗಳಿಸಿದ್ದಾರೆ.

 

View this post on Instagram

 

Unleashing my inner nerd ????…. #watchmen #journeyintoimagination #quarantine #graphicnovel

A post shared by Pooja Hegde (@hegdepooja) on

Click to comment

Leave a Reply

Your email address will not be published. Required fields are marked *