ಬಿಗ್ಬಾಸ್ ಮನೆ ಅಂದ್ರೆ ಫುಲ್ ಸೆಕ್ಯೂರ್ ಇರುತ್ತೆ. ಕಂಟೆಸ್ಟೆಂಟ್ ಗೆ ಏನೇ ತೊಂದ್ರೆ ಆದ್ರು ಬಿಗ್ ಬಾಸ್ ಇರ್ತಾರೆ. ಮನೆ ತುಂಬಾ ಕ್ಯಾಮೆರಾಗಳಿವೆ. ಅಲ್ಲದೇ ಮನೆಯ ಕಂಟೆಸ್ಟೆಂಟ್ ಎಲ್ಲರೂ ಒಟ್ಟಾಗಿ ಇರ್ತಾರೆ. ಹೀಗಿರುವಾಗ ಬಿಗ್ಬಾಸ್ ಸೀಸನ್-8ರಲ್ಲಿ ಪ್ರಾಣ ಬೆದರಿಕೆ ಆಪಾದನೆಯೊಂದು ಕೇಳಿ ಬಂದಿದೆ. ಒಂಟಿ ಮನೆಯ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿರುವ ದಿವ್ಯಾ ಉರುಡುಗ ಹಾಗೂ ರಘು ಗೌಡಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಅಷ್ಟಕ್ಕೂ ಇವರಿಬ್ಬರಿಗೆ ಪ್ರಾಣ ಬೆದರಿಕೆ ಹಾಕಿರೋದು ಬೇರೆ ಯಾರೂ ಅಲ್ಲ ಬಿಗ್ ಮನೆಯ ಮತ್ತೊಬ್ಬ ಕಂಟೆಸ್ಟೆಂಟ್.
Advertisement
ಬಿಗ್ ಬಾಸ್, ಮಾತುಗಾರ ಚಟುವಟಿಕೆ ವೇಳೆ ಹೆಚ್ಚಾಗಿ ಮಾತನಾಡುವ ಕಂಟೆಸ್ಟೆಂಟ್ ಲ್ಯಾಗ್ ಮಂಜುಗೆ ಮುಂದಿನ ಆದೇಶ ಬರುವವರೆಗೂ ಮಾತನಾಡದಂತೆ ಆದೇಶ ನೀಡಿದ್ದರು. ಅವರು ಯಾರ ಬಳಿಯಾದ್ರೂ ಏನೇ ಮಾತಾಡಬೇಕು ಅಂದ್ರೂ ವೈಷ್ಣವಿ ಮೂಲಕ ಸನ್ನೆ ಸೂಚನೆ ಮಾತನಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಹೀಗಾಗಿ ಮಂಜು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇದನ್ನೇ ಇಟ್ಕೊಂಡು ಮನೆಯ ಕೆಲ ಕಂಟೆಸ್ಟೆಂಟ್ ಮಂಜು ಕಾಲೆಳೆಯುತ್ತಿದ್ದರು.
Advertisement
Advertisement
ನಿನ್ನೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಉರುಡುಗ, ರಘು, ಅರವಿಂದ್, ಲ್ಯಾಗ್ ಮಂಜು ಹಾಗೂ ವಿಶ್ವ ಕುಳಿತುಕೊಂಡಿದ್ದರು. ಈ ವೇಳೆ ದಿವ್ಯಾ ಮಂಜುಗೆ ಹೀಯಾಳಿಸುತ್ತಿದ್ದರು. ನೀನು ಕುಳಿತುಕೊಳ್ಳೋ ಸ್ಟೈಲ್ ತುಂಬಾ ಚೆನ್ನಾಗಿದೆ.. ಹಾಗೇ ಹೀಗೆ ಅಂತಾ ಟೀಸ್ ಮಾಡ್ತಿದ್ದರು. ಆಗ ಮಂಜು, ಅಲ್ಲಿಯೇ ಇದ್ದ ಮರಳಿನ ಮೇಲೆ ನಿಮಗೆ ಐತಿ ಎಂದು ಬರೆದರು. ಆಗ ರಘು, ಬಿಗ್ ಬಾಸ್ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳ್ತಿದ್ದಂತೆ ದಿವ್ಯಾ ಉರುಡುಗ, ಬಿಗ್ ಬಾಸ್ ಪ್ರಾಣ ಬೆದರಿಕೆ ಹಾಕ್ತಿದ್ದಾರೆ ಎಂದು ಮಂಜು ಬಗ್ಗೆ ಆರೋಪ ಮಾಡಿದರು.
Advertisement
ಅಷ್ಟರಲ್ಲಿ ವೈಷ್ಣವಿ ಎಂಟ್ರಿ ಕೊಡ್ತಾರೆ ಆಗ ಮಂಜು ವೈಷ್ಣವಿ ಮೂಲಕ ಮಾತಾಡಿಸ್ತಾರೆ. ರಘು ದಿವ್ಯಾ ಮುಗಿಸಿಬೇಡ್ತೇನೆ. ತಿಂದು ಹಾಕ್ತೇನೆ ಎಂದು ಮಂಜು ಸನ್ನೆ ಮಾಡ್ತಾರೆ. ಆಗ ವೈಷ್ಣವಿ ಅವರೇನು ಕಡಲೇ ಕಾಯಿ ತಿನ್ನೋದಿಕ್ಕೆ ಎಂದು ಕಾಮಿಡಿ ಮಾಡ್ತಾರೆ. ಕಟಕಟ ಹಲ್ಲು ಕಡಿಯುತ್ತಾ ಮಂಜು ದಿವ್ಯಾ ಉರುಡುಗ ಹಾಗೂ ರಘು ಗೌಡ ಸೀಳಿ ಬೆಂಕಿಗೆ ಹಾಕುತ್ತೇನೆ ಎಂದು ಸನ್ನೆ ಮಾಡ್ತಾರೆ. ಆಗ ದಿವ್ಯಾ ಉರುಡುಗ, ಬಿಗ್ ಬಾಸ್ ನನ್ನ ಜೀವಕ್ಕೆ ಏನಾದ್ರೂ ಆದ್ರೆ ಮಂಜು ಕಾರಣ ಅಂತಾ ಹೇಳಿ ಜೋರಾಗಿ ನಕ್ಕಿದರು. ಒಟ್ನಲ್ಲಿ ಮಂಜು ಮಾತಾಡದೇ ಇದ್ರೂ ತಮ್ಮ ಆ?ಯಕ್ಷನ್ ಮೂಲಕವೇ ಸಖತ್ ಕಾಮಿಡಿ ಮಾಡ್ತಾ ಮನೆಯವರನ್ನು ನಗಿಸುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ.