Connect with us

Dina Bhavishya

ದಿನ ಭವಿಷ್ಯ: 31-07-2020

Published

on

ಪಂಚಾಂಗ:
ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ
ಬೆಳಗ್ಗೆ 7:06 ರಿಂದ ಮೂಲಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:14

ಮೇಷ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಉದ್ಯೋಗ ಬಡ್ತಿಗೆ ಅಡೆತಡೆ, ಆಧ್ಯಾತ್ಮಿಕ ಕ್ಷೇತ್ರದವರಿಗೆ ತೊಂದರೆ, ಮಾನಸಿಕ ಕಿರಿಕಿರಿ, ಶತ್ರುಗಳಿಂದ ತೊಂದರೆ, ಮಾಟ-ಮಂತ್ರ ತಂತ್ರ ದೋಷ, ಬಂಧುಗಳಿಂದ ದೂರವಿರುವುದು ಒಳಿತು.

ವೃಷಭ: ಗಂಭೀರ ಪರಿಣಾಮಗಳು ಇಲ್ಲ, ಉದ್ಯೋಗದಲ್ಲಿ ಪ್ರಗತಿ, ಪ್ರಯಾಣದಲ್ಲಿ ಹಿನ್ನಡೆ, ಹಿರಿಯ ಸಹೊದರನಿಂದ ಸಮಸ್ಯೆ, ಹಣಕಾಸು ವ್ಯವಹಾರದಲ್ಲಿ ನಿರಾಸೆ, ಸ್ಥಿರಾಸ್ತಿ ವಿಚಾರದಲ್ಲಿ ಸಂಂಕಷ್ಟಕ್ಕೆ ಸಿಲುಕುವಿರಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಮಿಥುನ: ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ತೊಂದರೆ, ಕಂಕಣ ಭಾಗ್ಯಕ್ಕೆ ಕಂಟಕ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಆರೋಗ್ಯ ಸಮಸ್ಯೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಉದ್ಯೋಗದಲ್ಲಿ ಹಿನ್ನಡೆ, ಪ್ರೇಮ ವಿಚಾರದಲ್ಲಿ ವೈಮನಸ್ಸು.

ಕಟಕ: ಉದ್ಯೋಗದಲ್ಲಿ ನಷ್ಟ, ಕೌಟುಂಬಿಕ ಕಲಹ, ಸೋಲು ನಷ್ಟ ನಿರಾಸೆಗಳಿಂದ ಕಿರಿಕಿರಿ, ಭವಿಷ್ಯದ ಚಿಂತೆಗಳು, ಸಂಗಾತಿಯಿಂದ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಸಿಂಹ: ಭಾವನೆಗಳಿಗೆ ಪೆಟ್ಟು, ಮಕ್ಕಳ ಜೀವನದಲ್ಲಿ ಏರುಪೇರು, ದುಶ್ಚಟಗಳಿಂದ ಆಯುಷ್ಯಕ್ಕೆ ಕಂಟಕ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು, ಕುಟುಂಬದಿಂದ ದೂರಾಗುವ ಚಿಂತೆ, ನಿದ್ರೆಯಲ್ಲಿ ದುಸ್ವಪ್ನ, ಆಕಸ್ಮಿಕ ನಷ್ಟ.

ಕನ್ಯಾ: ಉದ್ಯೋಗ-ವ್ಯಾಪಾರದಲ್ಲಿ ತೊಂದರೆ, ಮಾಟ-ಮಂತ್ರ ತಂತ್ರದ ದೋಷ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಆರೋಗ್ಯದಲ್ಲಿ ಏರುಪೇರು, ಪಾಲುದಾರಿಕೆಯಿಂದ ಅಶಾಂತಿ, ಮಿತ್ರರಿಂದ ಮಾನಸಿಕ ವೇದನೆ, ಪೆಟ್ಟು ಮಾಡಿಕೊಳ್ಳುವ ಸಂಭವ.

ತುಲಾ: ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಗರ್ಭಿಣಿಯರು ಎಚ್ಚರಿಕೆಯಲ್ಲಿರಬೇಕು, ಬಂಧುಗಳಿಂದ ದೂರವಿರಿ, ಪ್ರಯಾಣದಲ್ಲಿ ಜಾಗ್ರತೆ, ತಂದೆಯಿಂದ ಕಿರಿಕಿರಿ, ದುಸ್ವಪ್ನ, ಅನಗತ್ಯ ಖರ್ಚು, ಗುರು-ದೈವ ನಿಂದನೆ ಮಾಡುವ ಪರಿಸ್ಥಿತಿ.

ವೃಶ್ಚಿಕ: ಪೆಟ್ಟಾಗುವ ಸಾಧ್ಯತೆ, ಆರ್ಥಿಕ ಸಂಕಷ್ಟ, ಹೂಡಿಕೆಯಿಂದ ತೊಂದರೆ, ಸಂತಾನದಿಂದ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಮಿತ್ರರಿಂದ ಹಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೆಲುವು.

ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ, ತಂದೆಯಿಂದ ಸಹಕಾರ, ಹಣಕಾಸು ವ್ಯವಹಾರದಲ್ಲಿ ಎಚ್ಚರ, ವಾಹನ-ಸ್ಥಿರಾಸ್ತಿ ವ್ಯವಹಾರದಲ್ಲಿ ಮೋಸ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದಾಂಪತ್ಯದಲ್ಲಿ ಕಿರಿಕಿರಿ.

ಮಕರ: ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಸುದ್ದಿ ಕೇಳುವ ಸಂಭವ, ತಂದೆ-ಮಕ್ಕಳಲ್ಲಿ ವೈಮನಸ್ಸು, ಸಾಲ ಬಾಧೆ, ಕೆಲಸಗಾರರಿಂದ ಕಿರಿಕಿರಿ, ಉದ್ಯೋಗದಲ್ಲಿ ಪ್ರಗತಿ, ಪ್ರೇಮಿಗಳಿಗೆ ಅನುಕೂಲ.

ಕುಂಭ: ಮಿತ್ರರಿಂದ ಸಹಕಾರ, ಸಹೋರರಿಂದ ಸಂಕಷ್ಟ, ಸ್ಥಿರಾಸ್ತಿ-ವಾಹನ ಯೋಗ, ಶುಭ ಕಾರ್ಯಕ್ಕೆ ತೊಂದರೆ, ಗರ್ಭ ದೋಷ, ಮಕ್ಕಳಿಂದ ಬೇಸರ.

ಮೀನ: ಅದೃಷ್ಟ ಕೈ ತಪ್ಪುವ ಸಂಭವ, ಉದ್ಯೋಗದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅರ್ಥಿಕ ನಷ್ಟ, ಸ್ಥಿರಾಸ್ತಿಯಲ್ಲಿ ಅನುಕೂಲ, ಸಂಗಾತಿಯಿಂದ ಧನಾಗಮನ, ಉದ್ಯೋಗದಲ್ಲಿ ಒತ್ತಡ, ಭಾವನಾತ್ಮಕವಾಗಿ ಕೆರಳುವಿರಿ.

Click to comment

Leave a Reply

Your email address will not be published. Required fields are marked *