Connect with us

Dina Bhavishya

ದಿನ ಭವಿಷ್ಯ: 30-07-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 7:49 ನಂತರ ಜ್ಯೇಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:55
ಯಮಗಂಡಕಾಲ: ಬೆಳಗ್ಗೆ 6:09 ರಿಂದ 7:45

ಮೇಷ: ಉದ್ಯೋಗಾವಕಾಶ ಪ್ರಾಪ್ತಿ, ಕೆಲಸಗಳಿಗೆ ಕಾರ್ಮಿಕರು ದೊರೆಯುವುದು, ವ್ಯಾಪಾರೋದ್ಯಮದಲ್ಲಿ ಅನುಕೂಲ, ಬಂಧುಗಳಿಂದ ಸಹಕಾರ, ಮಕ್ಕಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ತಂದೆಯ ಸ್ನೇಹಿತರಿಂದ ಸಹಾಯ, ಹಣಕಾಸು ಅನುಕೂಲ, ಸರ್ಕಾರಿ ಉದ್ಯೋಗಸ್ಥರಿಗೆ ಒತ್ತಡ, ಉದ್ಯೋಗದಲ್ಲಿ ಬಡ್ತಿ.

ಮಿಥುನ: ಸ್ಥಿರಾಸ್ತಿ ಖರೀದಿಗೆ ಅನುಕೂಲ, ವಾಹನ ಖರೀದಿಗೆ ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಒಳ್ಳೆಯ ಹೆಸರು, ಅಧಿಕ ತಿರುಗಾಟ, ಸಾಲ ಬಾಧೆಯಿಂದ ಮುಕ್ತಿ ಸಾಧ್ಯತೆ.

ಕಟಕ: ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಯಿಂದ ತೊಂದರೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ, ನೆಮ್ಮದಿಗೆ ಭಂಗ.

ಸಿಂಹ: ವ್ಯಾಪಾರಸ್ಥರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಶುಭ ಫಲ, ಮನೆಯಲ್ಲಿ ಅಶಾಂತಿ ವಾತಾವರಣ, ಮನಸ್ಸಿಗೆ ಬೇಸರ.

ಕನ್ಯಾ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪ್ರಾಪ್ತಿ, ಅಧಿಕವಾದ ಉಷ್ಣ ಬಾಧೆ, ತಲೆ ನೋವು, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಘ್ನ.

ತುಲಾ: ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ಚಿಂತೆಯಿಂದ ನಿದ್ರಾಭಂಗ.

ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ, ಬಂಧುಗಳಿಂದ ಸಮಸ್ಯೆ, ಸರ್ಕಾರಿ ಉದ್ಯೋಗಸ್ಥರಿಗೆ ಲಾಭ, ಮಕ್ಕಳಲ್ಲಿ ಮನಃಸ್ತಾಪ, ಸಾಲಬಾಧೆಯಿಂದ ಮಾನಹಾನಿ.

ಧನಸ್ಸು: ದಾಂಪತ್ಯದಲ್ಲಿ ಮನಃಸ್ತಾಪ, ಪ್ರೇಮಿಗಳಿಗೆ ತೊಂದರೆ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗದಲ್ಲಿ ಕಳೆದುಕೊಳ್ಳುವ ಸಾಧ್ಯತೆ.

ಮಕರ: ಸಾಲಗಾರರಿಂದ ಮುಕ್ತಿ ಸಾಧ್ಯತೆ, ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳೊಂದಿಗೆ ಮನಃಸ್ತಾಪ.

ಕುಂಭ: ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಸಂಸಾರದಲ್ಲಿ ಅಹಂಭಾವ, ದಾಂಪತ್ಯದಲ್ಲಿ ವಿರಸ, ಉದ್ಯೋಗದಲ್ಲಿ ಬಡ್ತಿ.

ಮೀನ: ಅಕ್ರಮ ಕಾರ್ಯಗಳಿಂದ ತೊಂದರೆ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಸ್ನೇಹಿತರಲ್ಲಿ ವೈಮನಸ್ಸು, ಸಂಗಾತಿ ದೂರವಾಗುವಷ್ಟು ಕಲಹ.

Click to comment

Leave a Reply

Your email address will not be published. Required fields are marked *