Connect with us

Dina Bhavishya

ದಿನ ಭವಿಷ್ಯ 27-07-2020

Published

on

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ, ಉಪರಿ ಅಷ್ಟಮಿ ತಿಥಿ
ಸೋಮವಾರ, ಚಿತ್ತ ನಕ್ಷತ್ರ,

ರಾಹುಕಾಲ: ಬೆಳಗ್ಗೆ 7:45 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:30

ಮೇಷ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ವೈರಿಗಳಿಂದ ದೂರವಿದ್ದರೆ ಉತ್ತಮ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಲ್ಲಿ ಲಾಭ.

ವೃಷಭ: ಹಿರಿಯರ ಮಾತಿಗೆ ಗೌರವ ಕೊಡಿ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ನಷ್ಟ, ದಾಯಾದಿಗಳ ಕಲಹ, ಕೆಲಸಗಳಲ್ಲಿ ಅಲ್ಪ ಪ್ರಗತಿ,

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.

ಕಟಕ: ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಸೌಖ್ಯ, ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಈ ದಿನ ಮಿಶ್ರ ಫಲ.

ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕನ್ಯಾ: ತಂಪು ಪಾನೀಯಗಳಿಂದ ಅನಾರೋಗ್ಯ, ಅವಿವಾಹಿತರಿಗೆ ವಿವಾಹ ಯೋಗ, ಮಾನಸಿಕ ನೆಮ್ಮದಿ, ಹಣಕಾಸು ಸಮಸ್ಯೆ ಅಲ್ಪ ಚೇತರಿಕೆ, ಈ ದಿನ ಮಿಶ್ರ ಫಲ ಯೋಗ.

ತುಲಾ: ಮಾನಸಿಕ ಒತ್ತಡ, ಕಾರ್ಯದಲ್ಲಿ ವಿಕಲ್ಪ, ಉದರ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ವಿಪರೀತ ಸಾಲ ಬಾಧೆ.

ವೃಶ್ಚಿಕ: ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರೀತಿ ಸಮಾಗಮ, ಆದಾಯಕ್ಕಿಂತ ಖರ್ಚು ಹೆಚ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ,

ಧನಸ್ಸು: ಆತ್ಮೀಯರಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ವಿಳಂಬ, ವಸ್ತ್ರಾಭರಣ ಖರೀದಿಗೆ ಮನಸ್ಸು, ದ್ರವ ರೂಪದ ವಸ್ತುಗಳಿಂದ ಲಾಭ.

ಮಕರ: ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯವಹಾರದಲ್ಲಿ ಏರುಪೇರು, ಆತುರ ಸ್ವಭಾವ, ಶತ್ರುಗಳ ಬಾಧೆ, ವಾದ-ವಿವಾದಗಳಲ್ಲಿ ಸೋಲು.

ಕುಂಭ: ಸಹೋದರರಿಂದ ಸಹಾಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಮೋಸ,

ಮೀನ: ಖರ್ಚಿನ ಬಗ್ಗೆ ನಿಗಾವಹಿಸಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಮನೆಯಲ್ಲಿ ನೆಮ್ಮದಿ, ವಿದ್ಯಾಭ್ಯಾಸಕ್ಕೆ ಅಡೆತಡೆ, ಉತ್ತಮ ಪ್ರಗತಿ.

Click to comment

Leave a Reply

Your email address will not be published. Required fields are marked *