Connect with us

Dina Bhavishya

ದಿನ ಭವಿಷ್ಯ: 23-07-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಸಂಜೆ 5:04 ನಂತರ ಚತುರ್ಥಿ,
ಗುರುವಾರ, ಮಖ ನಕ್ಷತ್ರ,
ಸಂಜೆ 5:08 ಪೂರ್ವಫಾಲ್ಗುಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:07 ರಿಂದ 7:42

ಮೇಷ: ಆಕಸ್ಮಿಕ ದುರ್ಘಟನೆ, ಮಾನಸಿಕ ವ್ಯಥೆ-ಆತಂಕ, ವಾಹನ ಚಾಲನೆಯಲ್ಲಿ ಎಚ್ಚರ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್‍ಗಳಿಗೆ ಓಡಾಟ.

ವೃಷಭ: ದಾಂಪತ್ಯದಲ್ಲಿ ಆಲಸ್ಯ, ಪರಿಚಯಸ್ಥರಿಂದ ಸಹಕಾರ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ ಒಲಿಯುವುದು.

ಮಿಥುನ: ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೊಂದಿಗೆ ಪ್ರಯಾಣ ಆಲೋಚನೆ, ನೀವಾಡುವ ಮಾತಿನಿಂದ ಸಮಸ್ಯೆ, ಶತ್ರುಗಳ ಬಾಧೆ.

ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ವಿವಾಹಕ್ಕೆ ಅಡೆತಡೆ, ಕಾಲುನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಕ್ಕಳಿಂದ ಬೇಸರ, ಸ್ನೇಹಿತರಿಂದ ತೊಂದರೆ.

ಸಿಂಹ: ಶತ್ರುಗಳಿಂದ ನೆಮ್ಮದಿ ಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ದೂರವಾಗಲು ಚಿಂತನೆ, ವಿಕೃತ ಆಸೆಗಳಿಗೆ ಮನಸ್ಸು.

ಕನ್ಯಾ: ನೆರೆಹೊರೆಯವರೊಂದಿಗೆ ಕಿರಿಕಿರಿ, ಅನುಕೂಲದ ವಾತಾವರಣ, ಕುಟುಂಬದಲ್ಲಿ ಮನಃಸ್ತಾಪ, ಮಕ್ಕಳಿಗೆ ಅದೃಷ್ಟ ಕೈ ಕೊಡುವುದು, ಉದ್ಯೋಗ ಸ್ಥಳದಲ್ಲಿ ಸಹಕಾರ.

ತುಲಾ: ದೀರ್ಘಕಾಲದ ಸಮಸ್ಯೆಗಳು ಪರಿಹಾರ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಭೂ ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ಉದ್ಯೋಗ ದೊರಕಿ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ: ವಾಹನ ಚಾಲನೆಯಲ್ಲಿ ಎಚ್ಚರ, ಹಳೇ ವಸ್ತುಗಳಿಂದ ಪೆಟ್ಟಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಬಂಧುಗಳ ಏಳಿಗೆಯಿಂದ ಕೋಪ, ಮಾನಸಿಕ ವ್ಯಥೆ.

ಧನಸ್ಸು: ನಿದ್ರೆ ಅಧಿಕ, ಆತ್ಮೀಯರು ದೂರಾಗುವರು, ಕುಟುಂಬದಲ್ಲಿ ನಷ್ಟ, ಆಕಸ್ಮಿಕ ದುರ್ಘಟನೆ, ಮನೋರೋಗ ಬಾಧಿಸುವುದು.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆಗಳು ಈಡೇರುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಶುಭ ಫಲ ಯೋಗ ಪ್ರಾಪ್ತಿ.

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ, ಕಾರ್ಮಿಕರು, ಬಾಡಿಗೆದಾರರಿಂದ ನಷ್ಟ, ಹಣಕಾಸು ಸಮಸ್ಯೆ.

ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ವೈಮನಸ್ಸು, ಶತ್ರುತ್ವ ಹೆಚ್ಚಾಗುವುದು, ಕುಟುಂಬಸ್ಥರಿಂದಲೇ ಅವಕಾಶ ವಂಚಿತರಾಗುವಿರಿ,
ಗೌರವಕ್ಕೆ ಧಕ್ಕೆ.

Click to comment

Leave a Reply

Your email address will not be published. Required fields are marked *