ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ
ತಿಥಿ: ತ್ರಯೋದಶಿ
ನಕ್ಷತ್ರ: ರೋಹಿಣಿ
ರಾಹುಕಾಲ: 12.28 ರಿಂದ 2.04
ಗುಳಿಕಕಾಲ: 10.52 ರಿಂದ 12.28
ಯಮಗಂಡಕಾಲ: 7.40 ರಿಂದ 9.16
Advertisement
ಮೇಷ: ಸ್ವಂತ ವಿಚಾರದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ.
Advertisement
ವೃಷಭ: ಕೋರ್ಟ್ ಕೇಸ್ಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ದ್ರೋಹ, ಈ ದಿನ ಮಿಶ್ರಫಲ.
Advertisement
ಮಿಥುನ: ಗುರುಹಿರಿಯರ ಭೇಟಿ, ಮಹಿಳೆಯರಿಗೆ ವಿಶೇಷ ದಿನ, ವ್ಯಾಪಾರಗಳಲ್ಲಿ ಲಾಭ, ಮಾಡುವ ಕೆಲಸದಲ್ಲಿ ಜಯ, ಶುಭ ಕಾರ್ಯ ನಿಮಿತ್ತ ಪ್ರಯಾಣ.
Advertisement
ಕಟಕ: ತೀರ್ಥಕ್ಷೇತ್ರ ಪ್ರಯಾಣ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಈ ದಿನ ಶುಭ ಫಲ.
ಸಿಂಹ: ಅತಿ ಆತ್ಮವಿಶ್ವಾಸದಿಂದ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅನಗತ್ಯ ವಿಚಾರಗಳಿಂದ ದೂರವಿರಿ, ಕುಟುಂಬದ ಬಗ್ಗೆ ಯೋಚನೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕನ್ಯಾ: ಮನೆಯಲ್ಲಿ ಸಂತಸ, ದ್ರವ್ಯಲಾಭ, ದೂರ ಪ್ರಯಾಣ, ಬಂಧು ಮಿತ್ರರ ಸಮಾಗಮ, ಸುಖ ಭೋಜನ, ಮನೆಯಲ್ಲಿ ಶುಭ ಸಮಾರಂಭ.
ತುಲಾ: ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಹಣಕಾಸು ಲಾಭ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಎಚ್ಚರ, ವ್ಯವಹಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತೊಂದರೆ, ಅನಗತ್ಯ ವಿಪರೀತ ಓಡಾಟ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಸಹಕಾರ.
ಧನಸ್ಸು: ಸ್ತ್ರೀಯರಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಚೋರಭಯ, ವಾಹನ ಚಾಲನೆಯಲ್ಲಿ ಎಚ್ಚರ.
ಮಕರ: ಈ ದಿನ ವಿಪರೀತ ಖರ್ಚು, ಕುಟುಂಬದಲ್ಲಿ ಆತ್ಮೀಯತೆ, ಮಾನಸಿಕ ನೆಮ್ಮದಿ, ದ್ರವ್ಯಲಾಭ, ಹಿತಶತ್ರುಗಳಿಂದ ತೊಂದರೆ.
ಕುಂಭ: ಈ ದಿನ ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ಪರರಿಂದ ಮೋಸ, ಸ್ಥಳ ಬದಲಾವಣೆ, ವಿಪರೀತ ಕೋಪ.
ಮೀನ: ವೈದ್ಯರಿಗೆ ವಿಶೇಷ ಲಾಭ, ಚೋರ ಭಯ, ಚಂಚಲ ಮನಸ್ಸು, ಶತ್ರುಗಳ ಕಾಟ, ಅನ್ಯರ ಮಾತಿಗೆ ಮನ್ನಣೆ ನೀಡುವಿರಿ.