– ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್ ಲೀಡ್ ಮಾಡಬೇಕು
ನವದೆಹಲಿ: ದಿನೇಶ್ ಕಾರ್ತಿಕ್ ಬದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇಯಾನ್ ಮಾರ್ಗನ್ ಅವರು ಮುನ್ನೆಡಸಬೇಕು ಎಂದು ಭಾರತ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ಹೇಳಿದ್ದಾರೆ.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ ಭರ್ಜರಿ 228 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಲ್ಲಿ ಒಳ್ಳೆಯ ಆರಂಭ ಕಂಡರೂ ಪಂದ್ಯದ ಮಧ್ಯೆಯಲ್ಲಿ ಕುಸಿದಿತು. ಕೊನೆಯಲ್ಲಿ ಮಾರ್ಗನ್ ತ್ರಿಪಾಠಿಯವರು ಉತ್ತಮವಾಗಿ ಆಡಿದರು. ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು.
Advertisement
Genuinely feel @Eoin16 should lead the side,(surly not*dk kolaimandaaaiii????
)World Cup winning captain should surly lead ipl side.I hope #kkr looks at this issue.nd win ✌????they need a leader who will lead from front like Rohit ,Dhoni or Virat..what a player #ipl #kkr #cricket
— Sreesanth (@sreesanth36) October 3, 2020
Advertisement
ಈ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಶ್ರೀಶಾಂತ್ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಯಾನ್ ಮಾರ್ಗನ್ ಅವರು ಕೆಕೆಆರ್ ತಂಡವನ್ನು ಮುನ್ನೆಡಸಬೇಕು. ದಿನೇಶ್ ಕಾರ್ತಿಕ್ ಅಲ್ಲ. ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಬೇಕು. ಕೆಕೆಆರ್ ತಂಡ ಇದರ ಬಗ್ಗೆ ಯೋಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ, ಧೋನಿ ಮತ್ತು ರೋಹಿತ್ ರೀತಿಯಲ್ಲಿ ಮುಂದೆ ನಿಂತು ತಂಡವನ್ನು ನಡೆಸುವವರು ಕ್ಯಾಪ್ಟನ್ ಆಗಬೇಕು ಎಂದು ತಿಳಿಸಿದ್ದಾರೆ.
Advertisement
Advertisement
ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 4 ಪಂದ್ಯದಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಇದರ ಜೊತೆಗೆ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಫಾರ್ಮ್ನಲ್ಲಿ ಇಲ್ಲ. ತಂಡಕ್ಕೆ ಬೇಕಾದಾಗ ರನ್ ಸಿಡಿಸುವಲ್ಲಿ ಕಾರ್ತಿಕ್ ವಿಫಲವಾಗಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡ ತಂಡ ಸಂಕಷ್ಟದಲ್ಲಿ ಇದ್ದಾಗ ಕ್ರೀಸಿಗೆ ಬಂದ ಕಾರ್ತಿಕ್ 8 ಬಾಲ್ ಆಡಿ ಕೇವಲ 6 ರನ್ ಸಿಡಿಸಿ ಔಟ್ ಆಗಿದ್ದರು. ಇದು ಕೆಕೆಆರ್ ಅಭಿಮಾನಿಗಳಿಗೂ ಬೇಸರ ತರಿಸಿತ್ತು.
ಆದರೆ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಮಾರ್ಗನ್ ಅವರು, ತಂಡಕ್ಕೆ ಅಗತ್ಯವಿದ್ದಾಗ ಬಂದು ಚಾಂಪಿಯನ್ ಇನ್ನಿಂಗ್ಸ್ ಆಡಿದ್ದರು. ಕೊನೆಯಲ್ಲಿ ಸಿಕ್ಸ್ಗಳ ಸುರಿಮಳೆಗೈದ ಮಾರ್ಗನ್ ಅವರು, ಭರ್ಜರಿ ಐದು ಸಿಕ್ಸ್ ಮತ್ತು ಒಂದು ಫೋರ್ ಸಮೇತ ಕೇವಲ 18 ಬಾಲಿನಲ್ಲೇ ಸ್ಫೋಟಕ 44 ರನ್ ಸಿಡಿಸಿದರು. ಈ ಮೂಲಕ ಭಾರಿ ರನ್ ಅಂತರದಿಂದ ಸೋಲುತ್ತಿದ್ದ ತಂಡವನ್ನು ಕೇವಲ 18 ರನ್ ಅಂತರದಲ್ಲಿ ಸೋಲುವಂತೆ ಮಾಡಿದ್ದರು.