ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಮೊಟ್ಟೆ ತಿನ್ನುವವರಿಗೆ ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಒಳ್ಳೆಯದು ಎಂದು ಗೊತ್ತಿರಬೇಕು. ಹಾಗೂ ಮೊಟ್ಟೆತಿನ್ನುವುದರಿಂದ ಏನು ಪ್ರಯೋಜನ ಸಿಗಲಿದೆ ಗೊತ್ತಾ..?
Advertisement
ಮೊಟ್ಟೆಯಲ್ಲಿರುವ ಪೋಟೀನ್ ದೇಹಕ್ಕೆ ಉತ್ತಮ ಪೋಷಕಾಂಶವನ್ನು ಒದಗಿಸುತ್ತದೆ.ಮೊಟ್ಟೆಯಿಂದ ಸೀಗುವಂತಹ ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಿಂದ ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳು ದೊರೆಯುತ್ತದೆ ಹೀಗಾಗಿ ವೈದ್ಯರು ಮೊಟ್ಟೆ ತಿನ್ನುವಂತೆ ಸಲಹೆಯನ್ನು ನೀಡುತ್ತಾರೆ.
Advertisement
Advertisement
* ದಿನಕ್ಕೆ ಒಂದು ಮೊಟ್ಟೆ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಮೊಟ್ಟೆಯ ಸೇವನೆಯಿಂದ ಉತ್ತಮ ಪ್ರಮಾಣದ ಪೋಷಕಾಂಶಗಳು , ಪೋಟೀನ್ಗಳು, ಸತು ಮತ್ತು ಕೊಲೈನ್ ದೊರೆಯುತ್ತದೆ. ಇದನ್ನೂ ಓದಿ: ಬಾದಾಮಿ ಸೇವನೆಯಿಂದ ದೊರೆಯಲಿದೆ ಉತ್ತಮ ಆರೋಗ್ಯ
Advertisement
* ಮೊಟ್ಟೆ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಬೊಜ್ಜು ಕರಗಿಸಲು ಸಹಕಾರಿಯಾಗಲಿದೆ. ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ.
* ಮೊಟ್ಟೆಯಲ್ಲಿ ವಿಟಮಿನ್ ಎ, ಇ, ಬಿ 6 ಹಾಗೂ ಥೈಮೆನ್ , ರಿಬೊಫ್ಲಾವಿನ್ ಪೋಲೆಟ್, ಕಬ್ಬಿಣ ಹಾಗೂ ಮೆಗ್ನೇಶಿಯಂ ಹಲವು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುವ ಮೂಲಕವಾಗಿ ಆರೋಗ್ಯವನ್ನು ಉತ್ತಮವಾಗಿಸುತ್ತದೆ.
* ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಹೆಚ್ಚಾಗಿ ವಿಟಮಿನ್ ಎ, ಹೆಚ್ಚಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
* ದೇಹದಲ್ಲಿ ರಕ್ತದ ಕೊರತೆ ಇದ್ದರೆ, ಅನೇಕ ಗಂಭೀರ ಕಾಯಿಲೆಗಳು ಎದುರಾಗಬಹುದು. ರಕ್ತಹೀನತೆ ಸಮಸ್ಯೆಯಾದಾಗ ಬೇಯಿಸಿದ ಮೊಟ್ಟೆಗಳನ್ನು ಸೇವಿಸಬೇಕು.
* ಮೊಟ್ಟೆ ಸೇವೆನೆಯಿಂದ ಚರ್ಮವು ಸುಂದರವಾಗುತ್ತದೆ. ಕೂದಲು ಉದ್ದ ಹಾಗೂ ದಪ್ಪವಾಗುವಲ್ಲಿ ಸಹಾಯ ಮಾಡುತ್ತದೆ.
* ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳು. ಖನಿಜಗಳು ಮತ್ತು ಜೀವಸತ್ವಗಳು ಹೆಚ್ಚಾಗಿದ್ದು, ಇದು ಉಗುರಗಳ ಹಾಗೂ ಕೂದಲು ಆರೋಗ್ಯವನ್ನು ಹೆಚ್ಚಿಸುತ್ತದೆ.