ಕೋಲ್ಕತ್ತಾ: ಕೋವಿಡ್ 19ಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಐಎಎಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.
ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷದ ದೇಬದತ್ತ ರೇ ಸೋಮವಾರ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕೊರೊನಾ ಪರೀಕ್ಷೆ ಮಾಡಿಸಿದ್ದರು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದರು.
Advertisement
Our heartfelt condolences to the family of our COVID warrior – Smt Debadutta Ray, WBCS(Exe), Deputy Magistrate and Deputy Collector, Chandannagar.
She was a very brave and dedicated officer.
May her soul RIP pic.twitter.com/8jP17HdAqX
— Howrah Municipal Corporation (@HowrahMunicipal) July 13, 2020
Advertisement
ಭಾನುವಾರ ಉಸಿರಾಟದ ಸಮಸ್ಯೆ ದಿಢೀರ್ ಉಲ್ಬಣವಾಗಿದ್ದರಿಂದ ಅವರನ್ನು ಸೆರಾಂಪೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ.
Advertisement
2010ರ ಬ್ಯಾಚ್ ಅಧಿಕಾರಿಯಾಗಿದ್ದ ಇವರು ಪಶ್ಚಿಮ ಬಂಗಾಳ ಮತ್ತು ವಿವಿಧ ರಾಜ್ಯಗಳಿಂದ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಡಂಕಣಿಗೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಸೋಂಕು ತಗುಲಿತ್ತು.
Advertisement
I, on behalf of the Govt of West Bengal, salute her spirit & the sacrifice she's made in service of the people of #Bengal. Spoke to her husband today & extended my deepest condolences. May the departed soul rest in peace & lord give her family strength to endure this loss. (2/2)
— Mamata Banerjee (@MamataOfficial) July 13, 2020
ದೇಬದತ್ತ ರೇ ಪತಿ ಮತ್ತು ನಾಲ್ಕು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.