Bengaluru CityCinemaDistrictsKarnatakaLatestMain Post

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕೊಟ್ಟೂರು!

ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿಯಾಗಿ ದೊಡ್ಮನೆಗೆ ಆಗಮಿಸಿ ಭಾರೀ ಸುದ್ದಿ ಮಾಡಿದ್ದ ಚೈತ್ರಾ ಕೊಟ್ಟೂರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಚೈತ್ರಾ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.

ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ ಚೈತ್ರಾಕೊಟ್ಟೂರು, ನಾಗರ್ಜುನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ಚೈತ್ರಾ ಹಾಗೂ ನಾಗರ್ಜುನ್ ಇಬ್ಬರು ಪ್ರೀತಿಸುತ್ತಿದ್ದು, ಇದೀಗ ಸದ್ದಿಲ್ಲದೇ ಸೈಲೆಂಟ್ ಆಗಿ ವಿವಾಹವಾಗುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗಷ್ಟೇ ಚೈತ್ರಾಕೊಟ್ಟೂರು ಹುಡುಗರು ತುಂಬಾ ಒಳ್ಳೆಯವರು ಎಂಬ ಹಾಡೊಂದನ್ನು ಬಿಡುಗಡೆಗೊಳಿಸಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲದೆ ಖಾಸಗಿ ವಾಹಿನಿಯೊಂದರ ಸಿರಿಯಲ್‍ನಲ್ಲಿ ಚೈತ್ರಾಕೊಟ್ಟೂರು ಅಭಿನಯಿಸಿದ್ದರು.

ಈ ಹಿಂದೆ ಬಿಗ್‍ಬಾಸ್ ಸೀಸನ್-7ರಲ್ಲಿ ಅವಧಿಯಲ್ಲಿ ಒಂದು ಬಾರೀ ಎಲಿಮಿನೆಟ್ ಆಗಿ ಮತ್ತೊಂದು ಬಾರಿ ವೈಲ್ಡ್ ಕಾರ್ಡ್ ಮೂಲಕ ಬಿಗ್‍ಮನೆಗೆ ಎಂಟ್ರಿ ನೀಡಿದ್ದರು.

Leave a Reply

Your email address will not be published.

Back to top button