Advertisements

ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಉಮಾಪತಿ

ಬೆಂಗಳೂರು: 25 ಕೋಟಿ ರೂ. ಡೀಲ್ ವಿಚಾರದ ಬಳಿಕ ಸ್ಯಾಂಡಲ್‍ವುಡ್ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಶೀತಲ ಸಮರ ಮುಂದುವರಿದ್ದು, ಇದೀಗ ದರ್ಶನ್ ವಿರುದ್ಧ ಉಮಾಪತಿಯವರು ಸಮರಕ್ಕೆ ಮುಂದಾಗಿದ್ದಾರೆ.

Advertisements

ಲೋನ್ ಲಡಾಯಿಗೆ ಕಾನೂನಾತ್ಮಕವಾಗಿ ಉತ್ತರ ನೀಡಲು ಉಮಾಪತಿ ಮುಂದಾಗಿದ್ದಾರೆ. ಈಗಾಗಲೇ ತಮ್ಮ ಪರವಾಗಿ ಹೆಸರಾಂತ ಇಬ್ಬರು ವಕೀಲರನ್ನು ನೇಮಿಸಿದ್ದಾರೆ. ಹನುಮಂತರಾಯಪ್ಪ ಮತ್ತು ಶ್ಯಾಂಸುಂದರ್ ಅವರನ್ನು ತಮ್ಮ ವಕೀಲರನ್ನಾಗಿ ನೇಮಿಸಿಕೊಂಡು ಉಮಾಪತಿ ಅವರು ದರ್ಶನ್ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದಾರೆ. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

Advertisements

ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ. ತಿರುಪತಿಯಿಂದ ಬರ್ತಾ ಇದ್ದಂತೆ ನಿರ್ಮಾಪಕ ಲೀಗಲ್ ಫೈಟ್ ಗೆ ಮುಂದಾಗಿದ್ದಾರೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಉತ್ತರಿಸೋದಾಗಿ ಉಮಾಪತಿ ಹೇಳಿದ್ದಾರೆ. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

Advertisements
Advertisements
Exit mobile version