ಕೋಲ್ಕತ್ತಾ: ಜಿಲ್ಲಾಧಿಕಾರಿಯೊಬ್ಬರು ಪಶ್ಚಿಮ ಬಂಗಾಳದ ದಟ್ಟ ಕಾಡಿನಲ್ಲಿ 20 ಕಿಲೋಮೀಟರ್ ನಡೆದುಕೊಂಡು ಹೋಗಿ 100 ಜನರಿಗೆ ಲಸಿಕೆ ಹಾಕಿಸಿ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
ಪಶ್ಚಿಮ ಬಂಗಾಳದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರೋ ಐಎಎಸ್ ಅಧಿಕಾರಿ ಸುರೇಂದ್ರ ಕುಮಾರ್ ಮೀನಾ ಉತ್ತರ ಬಂಗಾಳದ ಹಲವು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಿದ್ದಾರೆ. ಭಾರತ- ಭೂತಾನ್ ಗಡಿ ಭಾಗದ ಗ್ರಾಮದಲ್ಲಿರುವ ಜನರಿಗೆ ಲಸಿಕೆ ಹಾಕಿಸಲು 20 ಕಿಲೋಮೀಟರ್ ಕಾಡಿನಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಹೋಗಿರುವುದನ್ನು ಹಲವಾರು ಮಂದಿ ಮೆಚ್ಚಿದ್ದಾರೆ.
Advertisement
This is best thing you will watch today. He is Surender Kumar Meena. DM of Alipurduar, who trekked for the day through Forest & hills to reach a remote location on Bhutan border for vaccination drive. Such brings positive change. Kudos !! pic.twitter.com/oFP5C7jaAj
— Parveen Kaswan, IFS (@ParveenKaswan) June 19, 2021
Advertisement
ನಾನು ಹಾಗೂ ನಮ್ಮ ತಂಡ ಭಾರತ ಭೂತಾನ್ ಗಡಿಯ ಸಮೀಪವಿರುವ ಬಕ್ಸಾ ಬೆಟ್ಟ ಸಮೀಪ ಇರುವ ಅಡ್ಮಾವನ್ನು ತಲುಪಲು ಸುಮಾರು 11 ಕಿ.ಮೀ ಟ್ರೆಕ್ಕಿಂಗ್ ಮಾಡಿದೆವು. ಅತ್ಯಂತ ದೂರದ ಪ್ರದೇಶವಾದ ಅಡ್ಮಾದಲ್ಲಿ ಜನರಿಗೆ ಲಸಿಕೆ ಹಾಕಿಸಿದೆವು. ಅಡ್ಮಾವನ್ನು ತಲುಪಸಲು ಫೋಖಾರಿ, ಟೋರಿಬಾರಿ, ಶೆಗಾಂವ್ ಮತ್ತು ಫುಲ್ಬತಿ ಗ್ರಾಮಗಳನ್ನು ಹಾದು ಸುಮಾರು 16ರಿಂದ 18ಕಿಲೋಮೀಟರ್ ನಡೆದುಕೊಂಡು ಹೋದೆವು. ನಮ್ಮ ತಂಡದಲ್ಲಿದ್ದ ಆರೋಗ್ಯ ಸಿಬ್ಬಂದಿ ಲಸಿಕೆ ಇದ್ದ ಕೋಲ್ಡ್ ಬಾಕ್ಸ್ಗಳನ್ನು ಹೊತ್ತುಕೊಂಡು ಬಂದರು ಎಂದು ಸುರೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
Advertisement
ಅಡ್ಮಾ ತಲುಪುವ ಮಾರ್ಗ ಮಧ್ಯೆ ಸಿಕ್ಕ ಗ್ರಾಮಗಳಲ್ಲೂ ಸುರೇಂದ್ರ ಅವರು ಲಸಿಕೆ ಕುರಿತಾಗಿ ಜಾಗೃತಿಯನ್ನು ಮೂಡಿಸಿದ್ದಾರೆ. ದೇಶದಲ್ಲಿ ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೋಳ್ಳಲಾಗುತ್ತಿದೆ. ದೂರದ ಗ್ರಾಮಾಂತರ ಪ್ರದೇಶದ ಜನರು ಆದಿವಾಸಿ ಸಮುದಾಯದ ಜನರಿಗೂ ಲಿಕೆ ತುಲುಪಿಸೋದನ್ನು ಅಧಿಕಾರಿ ಮರೆತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.