ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರು ತಮ್ಮ ಪತ್ನಿಯ ಜೊತೆ ಕೈಹಿಡಿದು ನಡೆದುಕೊಂಡು ಹೋಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಲಾಕ್‍ಡೌನ್ ವೇಳೆಯಲ್ಲಿ ಸಿಂಪಲ್ ಆಗಿ ಮದುವೆಯಾದ ನಿಖಿಲ್ ಮದುವೆಯ ನಂತರ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಲಾಕ್‍ಡೌನ್ ಸಮಯದವನ್ನು ತಮ್ಮ ಪತ್ನಿ ರೇವತಿಯವರ ಜೊತೆ ಕಾಲ ಕಳೆಯುತ್ತಿರುವ ನಿಖಿಲ್ ಬುಧವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
https://www.instagram.com/p/CAryvmCJwvr/
ರೇವತಿಯವರ ಕೈಹಿಡಿದು ತೋಟದ ಮನೆಯಲ್ಲಿ ನಡೆದು ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ನಿಖಿಲ್ ಅವರು, ಇವತ್ತಿನ ದಿನ ಬಿಡದಿಯ ತೋಟದ ಮನೆಯ ಆವರಣದಲ್ಲಿ ಕಳೆದ ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ರೇವತಿಯವರು ಪಿಂಕ್ ಕಲರ್ ಸೀರೆ ಧರಿಸಿದ್ದರೆ, ನಿಖಿಲ್ ಬಿಳಿ ಬಣ್ಣದ ಶರ್ಟ್ ತೊಟ್ಟು ಮಿಂಚುತ್ತಿದ್ದಾರೆ. ನಿಖಿಲ್ ಜೋಡಿಯ ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೊರೊನಾ ಲಾಕ್‍ಡೌನ್‍ನಿಂದ ಸದ್ಯ ಯಾವುದೇ ಶೂಟಿಂಗ್ ಕೆಲಸವಿಲ್ಲದೇ ಮನೆಯಲ್ಲೇ ಕಾಲಕಳೆಯುತ್ತಿರುವ ನಿಖಿಲ್, ಪತ್ನಿ ರೇವತಿಯೊಂದಿಗೆ ಹಾಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಸಕ್ರಿಯವಾಗಿ ಇರುವ ನಿಖಿಲ್ ಮೊನ್ನೆಯಷ್ಟೇ ತಮ್ಮ ತಾತಾ ಅಜ್ಜಿಯ 66ನೇ ಮದುವೆ ವಾರ್ಷಿಕೋತ್ಸವಕ್ಕೆ ಶುಭಕೋರಿದ್ದರು. ಜೊತೆಗೆ ನಾಡಿನ ಆದರ್ಶ ದಂಪತಿ ಎಂದು ಹಾಡಿಹೊಗಳಿದ್ದರು.
https://www.instagram.com/p/CAkCLkJJ5h-/
ಲಾಕ್‍ಡೌನ್ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದರು. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಹಾಗೂ ರೇವತಿ ಮದುವೆಯಲ್ಲಿ ಎರಡು ಕುಟುಂಬದವರ ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು.
ಇತ್ತ ಕೊರೊನಾ ಲಾಕ್‍ಡೌನ್ ನಡುವೆ ಶೂಟಿಂಗ್‍ನಲ್ಲಿ ಕೆಲಸ ಮಾಡುವ ನೌಕರರಿಗೆ ಸಹಾಯ ಮಾಡಿದ್ದ ನಿಖಿಲ್, ಸೀತಾರಾಮ ಕಲ್ಯಾಣ ಮತ್ತು ಕುರುಕ್ಷೇತ್ರ ಸಿನಿಮಾದ ನಂತರ ರಾಜಕೀಯಕ್ಕೆ ಇಳಿದಿದ್ದರು. ಈಗ ಮತ್ತೆ ಸಿನಿಮಾದ ಕಡೆ ಮುಖ ಮಾಡಿದ್ದಾರೆ. ಹೊಸ ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಖಿಲ್ ಎಸ್.ಕೃಷ್ಣ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದ್ದು, ಚಿತ್ರದ ಶೀರ್ಷಿಕೆ ಇನ್ನೂ ಘೋಷಣೆಯಾಗಿಲ್ಲ.