ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಸೋಮವಾರ ದೃಢಪಟ್ಟಿದೆ.
ಸದ್ಯ ಮುಖ್ಯಮಂತ್ರಿಗಳು ಮೆದಕ್ ಜಿಲ್ಲೆಯ ಎರ್ರಾವಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ. ವೈದ್ಯರ ತಂಡ ಸಿಎಂ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂ ಅವರು ಏಪ್ರಿಲ್ 14 ರಂದು ನಲ್ಗೊಂಡ ಜಿಲ್ಲೆಯ ಹಲಿಯಾದಲ್ಲಿ ಟಿಆರ್‍ಎಸ್ ಅಭ್ಯರ್ಥಿ ಪರ ಕ್ಯಾಂಪೇನ್ ನಡೆಸಿದ್ದರು.