ಬೆಂಗಳೂರು: ಡ್ರಗ್ಸ್ ಮಾಫಿಯಾ ಜಾಲದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ ವಿಚಾರಣೆ ವೇಳೆ ಹಲವು ಸತ್ಯಸಂಗತಿಗಳು ಬೆಳಕಿಗೆ ಬರುತ್ತಿದೆ. ಇದನ್ನೂ ಓದಿ: ಎಲ್ಲ ಆರೋಪಗಳು ಸುಳ್ಳು, ನನ್ನ ಮಗಳು ಆರೋಪ ಮುಕ್ತಳಾಗಿ ಬರ್ತಾಳೆ: ರಾಗಿಣಿ ತಾಯಿ
ಬೆಂಗಳೂರಿನ ಡೈರಿ ಸರ್ಕಲ್ನ ಕಿದ್ವಾಯಿ ಆಸ್ಪತ್ರೆ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಯನ್ನು ಶನಿವಾರ ಸಿಸಿಬಿ ವಿಚಾರಣೆ ಮಾಡಿಲ್ಲ. ನನಗೆ ಜ್ವರ, ಬೆನ್ನು ನೋವಿ ಎಂದು ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಗಿಣಿಯ ಮೆಡಿಕಲ್ ರಿಪೋರ್ಟ್ ಬರುವ ತನಕ ಯಾವುದೇ ವಿಚಾರಣೆ ನಡೆಯುವುದು ಅನುಮಾನವಾಗಿದೆ. ಇದನ್ನೂ ಓದಿ: ಎರಡು ಬಾರಿ ಎಂಡಿಎಂಎ ಡ್ರಗ್ ಬಳಕೆ- ರಾಗಿಣಿ ತಪ್ಪೊಪ್ಪಿಗೆ!
Advertisement
ದೆಹಲಿಯಲ್ಲಿ ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಬಂಧನದಿಂದ ಆತಂಕಕ್ಕೆ ಒಳಗಾಗಿರುವ ರಾಗಿಣಿ ತಮ್ಮ ವಿಚಾರಣೆಯನ್ನು ಮುಂದೂಡಲು ಹೈಡ್ರಾಮಾವೇ ಮಾಡುತ್ತಿದ್ದಾರೆ. ಹೀಗಾಗಿ ಜಡ್ಜ್ ಮುಂದೆಯೂ ವಿಡಿಯೋ ಕಾನ್ಫರೆನ್ಸ್ನಲ್ಲಿ ತಮಗೆ ಬೆನ್ನು ನೋವಿದೆ ಎಂದು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಮನೆಗೆ ಹೋಗಿ ಬರಲು ಅವಕಾಶ ಕೇಳಿದ್ದಾರೆ. ಆದರೆ ಇದಕ್ಕೆಲ್ಲಾ ಅವಕಾಶ ಇಲ್ಲದ ಕಾರಣ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ವಿಚಾರಣೆ ಎದುರಿಸದೇ ವಿಶ್ರಾಂತಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಈ ಮಧ್ಯೆ ಸಾಂತ್ವನ ಕೇಂದ್ರಕ್ಕೆ ತನಿಖಾಧಿಕಾರಿ ಅಂಜುಮಾಲ ನಾಯ್ಕ್ ಭೇಟಿ ನೀಡಿದ್ದರು. ಕೆಲವೊಂದು ದಾಖಲಾತಿಗಳೊಂದಿಗೆ ಆಗಮಿಸಿದ ಅಂಜುಮಾಲ ಅವರು ಸತತ ಮೂರು ಗಂಟೆಗಳ ಕಾಲ ಸಾಂತ್ವನ ಕೇಂದ್ರದಲ್ಲೇ ಇದ್ದು ತೆರಳಿದ್ದಾರೆ. ಬೆನ್ನು ನೋವಿನ ನೆಪ ಹೇಳಿ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿರನ್ನು ಭೇಟಿ ಆಗಿ ಕೆಲವೊಂದು ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.
Advertisement
ಮೂರು ದಿನಗಳ ಕಸ್ಟಡಿಯಲ್ಲಿ ವಿಚಾರಣೆ ಮುಗಿಯಲಿಲ್ಲ ಎಂದಾದರೆ ಮತ್ತೆ 3ರಿಂದ 5 ದಿನಗಳ ಕಸ್ಟಡಿಗೆ ಸಿಸಿಬಿ ಕೇಳುವ ಸಾಧ್ಯತೆ ಇದೆ. ನಶೆ ನಂಟಿನಲ್ಲಿ ಸದ್ಯ ಸಿಸಿಬಿ ಬಂಧನದಲ್ಲಿರುವ ತುಪ್ಪದ ಬೆಡಗಿ ವಿಚಾರಣೆಯನ್ನು ಎದುರಿಸಲೇ ಬೇಕಾಗಿದೆ. ಜೊತೆಗೆ ಡ್ರಗ್ಸ್ ಸೇವನೆ ಬಗ್ಗೆ ತಪ್ಪೊಪ್ಪಿಕೊಂಡಿರುವುದರಿಂದ ಸಿಸಿಬಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ ರಾಗಿಣಿ ವಿಚಾರಣೆಯನ್ನು ತಪ್ಪಿಸಿಕೊಳ್ಳಲು ಇಲ್ಲಸಲ್ಲದ ನೆಪಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗುತ್ತಿದೆ.