– ಅವನು ತಪ್ಪು ಮಾಡಿಲ್ಲ, ಅದು ಹೇಗೆ ತಪ್ಪು ಒಪ್ಪಿಕೊಳ್ತಾನೆ
ಬೆಂಗಳೂರು: ಆರೋಪಿ ನವೀನ್ ಪೊಲೀಸರು ಮುಂದೆ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಅವರ ತಂದೆ ನನ್ನ ಮಗ ತಪ್ಪು ಒಪ್ಪಿಕೊಂಡಿರುವುದರ ಬಗ್ಗೆ ನನಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ
ಪಬ್ಲಿಕ್ ಜೊತೆ ಮಾತನಾಡಿದ ನವೀನ್ ತಂದೆ ಪವನ್, ನನ್ನ ಮಗ ತಪ್ಪು ಒಪ್ಪಿಕೊಂಡಿರುವುದರ ಬಗ್ಗೆ ನನಗೆ ಅನುಮಾನ ಇದೆ. ಅವನು ತಪ್ಪು ಮಾಡಿಲ್ಲ, ಅದು ಹೇಗೆ ತಪ್ಪು ಒಪ್ಪಿಕೊಳ್ಳುತ್ತಾನೆ. ತಪ್ಪು ಮಾಡಿದ್ದಾನೆ ಅಂತ ಪೊಲೀಸರು ಹೇಳಲಿ ಆಗ ನಾನು ಒಪ್ಪುತ್ತೇನೆ. ಆದರೆ ನನ್ನ ಮಗನ ಪರವಾಗಿ ನಾನು ಕಾನೂನು ಹೋರಾಟ ಮಾಡಲ್ಲ. ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆ ಆಗಲಿ, ನನ್ನ ಮಗನ ಪರವಾಗಿ ನಾನು ನಿಲ್ಲಲ್ಲ. ಅಯೋಧ್ಯೆ ಶಿಲಾನ್ಯಾಸದ ದಿನ ಸಿಹಿ ಹಂಚಿದ್ದೆ ಈ ಘಟನೆಗೆ ಕಾರಣ. ಇದೆಲ್ಲ ಪ್ಲಾನ್ ಮಾಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ನಮಗೂ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೂ ಸಂಬಂಧವೇ ಇಲ್ಲ. 10 ರಿಂದ 15 ವರ್ಷದಿಂದ ಅವರ ಜೊತೆ ಮಾತನಾಡುತ್ತಿಲ್ಲ. ಪುಲಕೇಶಿ ನಗರದ ಜನರಿಗೆ ಶ್ರೀನಿವಾಸ ಮೂರ್ತಿ ಸಹಾಯ ಮಾಡೋರು, ನಮಗೆ ಮಾತ್ರ ಸಹಾಯ ಮಾಡುತ್ತಿರಲಿಲ್ಲ. ನನ್ನ ಮಕ್ಕಳಿಗೆ ರಾಜಕೀಯವಾಗಿ ಬೆಳೆಯುವ ಉದ್ದೇಶ ಇರಲಿಲ್ಲ. ನನ್ನ ಮಗ ತಪ್ಪು ಒಪ್ಪಿಕೊಂಡರು ನಾನು ಒಪ್ಪಿಕೊಳ್ಳಲ್ಲ. ಆಗಂತ ಅವನ ಪರವಾಗಿ ನಿಲ್ಲಲ್ಲ. ಅಖಂಡ ಶ್ರೀನಿವಾಸ ನಮಗೆ 10 ರಿಂದ 15 ವರ್ಷದಿಂದ ನಮಗೆ ಯಾವುದೇ ಸಹಾಯ ಮಾಡಿಲ್ಲ. ನಮಗೆ ಸಂಬಂಧನೇ ಇಲ್ಲ ಎಂದು ನವೀನ್ ತಂದೆ ಹೇಳಿದರು.
Advertisement
Advertisement
ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸಗಾಯ್ ಪುರ ವಾರ್ಡಿನಿಂದ ನವೀನ್ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಯಾವುದೇ ಚರ್ಚೆಯನ್ನು ನನ್ನ ಮಗ ನನ್ನ ಬಳಿ ಮಾಡಿಲ್ಲ. ರಾಜಕೀಯಕ್ಕೆ ಬರುವ ಉದ್ದೇಶ ಕೂಡ ಇಲ್ಲ. ನಮಗೆ ರಾಜಕೀಯ ಬೇಡವೇ ಬೇಡ, ನಮ್ಮ ಇಬ್ಬರು ಮಕ್ಕಳಿಗೂ ಆ ಉದ್ದೇಶ ಇರಲಿಲ್ಲ. ಮುಜಾಮಿಲ್ ಪಾಷ ಯಾರು ಅಂತ ನನಗೆ ಗೊತ್ತಿಲ್ಲ. ಗಲಾಟೆ ಆಗಿರೋದಕ್ಕೆ ಏನೇನೋ ಹೇಳುತ್ತಿದ್ದಾರೆ. ಯಾರೋ ನಿಂತುಕೊಳ್ಳೋದಕ್ಕೆ ದೊಂಬಿ ಎಬ್ಬಿಸಿದ್ದಾರೆ ಅಷ್ಟೆ. ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡಿ ನಿಂತುಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ಆರೋಪಿ ನವೀನ್ ಮಹಮ್ಮದ್ ಪೈಗಂಬರ್ ಬಗ್ಗೆ ಸ್ಟೇಟಸ್ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಸ್ಟೇಟಸ್ ಬಗ್ಗೆ ಸಾಕಷ್ಟು ವಿರೋಧ ಬಂದ ಹಿನ್ನೆಲೆಯಲ್ಲಿ ಫೇಸ್ಬುಕ್ ಅಕೌಂಟ್ನಿಂದ ಡಿಲೀಟ್ ಮಾಡಿದ್ದಾಗಿ ತನಿಖೆ ವೇಳೆ ಹೇಳಿರುವುದಾಗಿ ತಿಳಿದುಬಂದಿದೆ.