CinemaLatestMain PostNational

ವಿಶ್ವದಲ್ಲಿ ತಂದೆಯಷ್ಟು ಮಗಳನ್ನು ಪ್ರೀತಿಸಲು ಯಾರಿಂದಲೂ ಸಾಧ್ಯವಿಲ್ಲ – ಅನುಷ್ಕಾ ಶೆಟ್ಟಿ

ಬೆಂಗಳೂರು: ಅಪ್ಪಂದಿರ ದಿನ ಪ್ರಯುಕ್ತ ಮಂಗಳೂರು ಬೆಡಗಿ ನಟಿ ಅನುಷ್ಕಾ ಶೆಟ್ಟಿ ತಮ್ಮ ತಂದೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವಿಶ್ ಮಡಿದ್ದಾರೆ.

ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ, ತಮ್ಮ ಬ್ಯುಸಿ ಶೆಡ್ಯೂಲ್‍ಗಳ ನಡುವೆ ಫ್ಯಾಮಿಲಿಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಬೇರೆ ರಾಜ್ಯದಲ್ಲಿದ್ದರೂ, ಕನ್ನಡದ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನವನ್ನು ಹೊಂದಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಇಲ್ಲದಿದ್ದರೂ, ಅಪರೂಪಕ್ಕೆ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸದ್ಯ ಈ ವಿಶೇಷ ದಿನದಂದು ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ತಮ್ಮ ತಂದೆ ಜೊತೆಗೆ ಕ್ಲಿಕ್ಕಿಸಿಕೊಂಡ ಒಂದಷ್ಟು ಫೋಟೋಗಳನ್ನು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಜೊತೆಗೆ, ಈ ಜಗತ್ತಿನಲ್ಲಿ ಯಾರು ಒಬ್ಬ ತಂದೆಯಷ್ಟು ಮಗಳನ್ನು ಪ್ರೀತಿಸಲು ಸಾಧ್ಯವಿಲ್ಲ. ಲವ್ ಯು ಪಪ್ಪಾ, ಹ್ಯಾಪಿ ಫದರ್ಸ್ ಡೇ ಎಂದು ಕ್ಯಾಪ್ಷನ್‍ನ್ಲಲಿ ಬರೆದುಕೊಂಡಿದ್ದಾರೆ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಹಾರ್ಟ್ ಸಿಂಬಲ್ ಹಾಗೂ ಕಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ.

Leave a Reply

Your email address will not be published. Required fields are marked *

Back to top button