CinemaLatestMain PostNational

ಡ್ರಗ್ಸ್ ಸೇವಿಸಲ್ಲ, ಸ್ಮೋಕ್ ಮಾಡ್ತೀನಿ: ಸಾರಾ ಅಲಿ ಖಾನ್

-ಧರ್ಮ ಪ್ರೊಡೆಕ್ಷನ್ ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್ ಅರೆಸ್ಟ್
-ಡ್ರಗ್ಸ್ ಸೇವನೆ ಆರೋಪ ತಳ್ಳಿ ಹಾಕಿದ ಶ್ರದ್ಧಾ
-ವಿಚಾರಣೆ ಮುಗಿಸಿ ಬಂದ ಸಾರಾ, ಶ್ರದ್ಧಾ

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಮುಂದೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಹಾಜರಾಗಿದ್ದರು. ವಿಚಾರಣೆ ವೇಳೆ ಸಾರಾ ಮತ್ತು ಶ್ರದ್ಧಾ ಡ್ರಗ್ಸ್ ಸೇವನೆಯ ಆರೋಪವನ್ನ ತಳ್ಳಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇತ್ತ ಬಿಟೌನ್ ಪದ್ಮಾವತಿ ದೀಪಿಕಾ ಪಡುಕೋಣೆ ವಿಚಾರಣೆ ಅಂತ್ಯವಾಗಿದ್ದು, ಮ್ಯಾನೇಜರ್ ಕರೀಷ್ಮಾ ಜೊತೆ ಎನ್‍ಸಿಬಿ ಕಚೇರಿಯಿಂದ ಹೊರ ಬಂದಿದ್ದಾರೆ. ಇದನ್ನೂ ಓದಿ: ಐದೂವರೆ ಗಂಟೆ ದೀಪಿಕಾಗೆ ಎನ್‍ಸಿಬಿ ಡ್ರಿಲ್-ಡ್ರಗ್ಸ್ ವ್ಯೂಹದಿಂದ ಹೊರ ಬರ್ತಾರಾ?

ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಸ್ನೇಹ, ಥೈಲ್ಯಾಂಡ್ ಪ್ರವಾಸ ಮತ್ತು ಡ್ರಗ್ಸ್ ಚಾಟ್, ಸೇವನೆ ಕುರಿತಾಗಿ ಶ್ರದ್ಧಾ ಕಪೂರ್ ಅವರನ್ನ ಪ್ರಶ್ನೆ ಮಾಡಲಾಗಿದೆ. ವಿಚಾರಣೆ ವೇಳೆ ಡ್ರಗ್ಸ್ ಸೇವನೆಯ ಆರೋಪವನ್ನ ಶ್ರದ್ಧಾ ತಳ್ಳಿ ಹಾಕಿದ್ದಾರೆ. ಸಿಬಿಡಿ ಆಯಿಲ್ ಗೆ ಸಂಬಂಧಿಸಿದಂತೆ ಜಯಾ ಸಾಹಾ ಜೊತೆ ತಾವು ಚಾಟ್ ನಡೆಸಿರೋದನ್ನ ಶ್ರದ್ಧಾ ಒಪ್ಪಿಕೊಂಡಿದ್ದಾರೆ. ಚಿಚೋರೆ ಸಿನಿಮಾಗಾಗಿ ಸುಶಾಂತ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆದ್ರೆ ಶ್ರದ್ಧಾ ಕಪೂರ್ ನೀಡಿರುವ ಉತ್ತರಗಳಲ್ಲಿ ತನಿಖಾಧಿಕಾರಿಗಳಿಗೆ ಸ್ಪಷ್ಟತೆ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆರು ಗಂಟೆಯ ವಿಚಾರಣೆ ಎದುರಿಸಿದ ಶ್ರದ್ಧಾ ಕಪೂರ್ ಹೊರ ಬಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ- ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ

ಇತ್ತ ಸಾರಾ ಅಲಿ ಖಾನ್ ಸಹ ಡ್ರಗ್ಸ್ ಸೇವನೆ ಮಾಡಿಲ್ಲ. ಸುಶಾಂತ್ ಜೊತೆಯಲ್ಲಿ ಸ್ಮೋಕ್ ಮಾಡುತ್ತಿದ್ದೆ. ಕೇದಾರನಾಥ್ ಸಿನಿಮಾದಿಂದಾಗಿ ಇಬ್ಬರ ಮಧ್ಯೆ ಒಳ್ಳೆಯ ಸ್ನೇಹವಿತ್ತು. ಸುಶಾಂತ್ ಫಾರ್ಮ್ ಹೌಸ್ ನಲ್ಲಿ ನಡೆದ ಪಾರ್ಟಿಗೆ ಹೋಗಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ಸಂಜೆ 5.30ಕ್ಕೆ ವಿಚಾರಣೆ ಮುಗಿಸಿ ಎನ್‍ಸಿಬಿ ಕಚೇರಿಯಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಡ್ರಗ್ಸ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

https://www.instagram.com/p/CFmV_RinWv2/

ಕ್ಷಿತಿಜ್ ಪ್ರಸಾದ್ ಅರೆಸ್ಟ್: ಇಂದು ವಿಚಾರಣೆಗೆ ಹಾಜರಾಗಿದ್ದ ಧರ್ಮ ಪ್ರೊಡೆಕ್ಷನ್ ಎಕ್ಸ್‍ಕ್ಯೂಟಿವ್ ಪ್ರೊಡ್ಯೂಸರ್ ಕ್ಷಿತಿಜ್ ಪ್ರಸಾದ್ ಎಂಬವರನ್ನ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖೆ ಸಹಕರಿಸದ ಹಿನ್ನೆಲೆ ಕ್ಷಿತಿಜ್ ಬಂಧನವಾಗಿದೆ. ಬಂಧನಕ್ಕೊಳಗಾಗಿರುವ ಕ್ಷಿತಿಜ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ದೇಶ ವಿರೋಧಿಗಳ ಜತೆ ದೀಪಿಕಾ ನಿಲ್ತಿದ್ರು: ಬಿಜೆಪಿ ನಾಯಕ

https://www.instagram.com/p/CFmabz6HRHO/

ದೀಪಿಕಾ ಮೊಬೈಲ್ ವಶಕ್ಕೆ: ಎನ್‍ಸಿಬಿ ಅಧಿಕಾರಿಗಳ ಪ್ರಶ್ನೆಗೆ ದೀಪಿಕಾ ನೇರವಾಗಿ ಉತ್ತರ ನೀಡದ ಹಿನ್ನೆಲೆ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ನೀವು ಡ್ರಗ್ಸ್ ತೆಗೆದುಕೊಳ್ತೀರಾ ಪ್ರಶ್ನೆಗೆ ದೀಪಿಕಾ ಸ್ಪಷ್ಟವಾದ ಉತ್ತರ ನೀಡಿಲ್ಲ. ಹಾಗೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೇ ಮೌನವಾಗಿದ್ದರು ಎಂದು ಮಾಧ್ಯಮಗಳು ಬಿತ್ತರಿಸಿವೆ. ಇದನ್ನೂ ಓದಿ: ಡ್ರಗ್ಸ್ ಚಾಟ್‍ನಲ್ಲಿ ದೀಪಿಕಾ ಹೆಸ್ರು- ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳ್ತಾರೆ ಎಂದ ಕಂಗನಾ

https://www.instagram.com/p/CFmMgszHH6k/

ತಪ್ಪೊಪ್ಪಿಕೊಂಡ ಪೀಕು?: ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವಾಟ್ಸಪ್ ಚಾಟ್ ತಮ್ಮದೇ ಎಂದು ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ವಾಟ್ಸಪ್ ಗ್ರೂಪ್ ಗಳ ಮುಖಾಂತರ ಸಿಗರೇಟ್ ತರಿಸಲಾಗುತ್ತಿತ್ತು ಎಂದು ಮಾತ್ರ ಹೇಳಿದ್ದು, ಚಾಟ್‍ಗೆ ಸಂಬಂಧಿಸಿದ ಪ್ರಶ್ನೆಗಳಿಗೂ ದೀಪಿಕಾ ಉತ್ತರಿಸಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

https://www.instagram.com/p/CFmaPZ-HU-q/

Leave a Reply

Your email address will not be published.

Back to top button