– ಡೋಂಟ್ ಕೇರ್ ಎಂದ ಪ್ರತಿಭಟನಾಕಾರರು
ಹಾವೇರಿ: ಕೆಎಸ್ಆರ್ಟಿಸಿ ನೌಕರರು ಹೋರಾಟ ಹಾವೇರಿಯಲ್ಲಿ ತೀವ್ರ ಕಾವು ಪಡೆದುಕೊಂಡಿದೆ.
ವಾಯುವ್ಯ ಸಾರಿಗೆ ಸಂಸ್ಥೆಯ ಡಿಸಿ ಆವಾಜ್ ಗೆ ಡೋಂಟ್ ಕೇರ್ ಎನ್ನದೆ, ಕರ್ತವ್ಯಕ್ಕೆ ಬರೋದಿಲ್ಲ ಅಂತ ಬಸ್ ಬಂದ್ ಮಾಡಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಡ್ಯೂಟಿ ಮಾಡಿ ಇಲ್ಲ ಮನೆಗೋಗಿ, ನಿಮ್ಮ ಮೇಲೆ ಕಂಪ್ಲೆಂಟ್ ಕೊಡ್ತೀನಿ ಅಂತ ನೌಕರರಿಗೆ ಅವಾಜ್ ಹಾಕಿದ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಜಗ್ಗದೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
Advertisement
Advertisement
ಬಸ್ ಆರಂಭ ಮಾಡೋದಿಲ್ಲ ಅಂದ ನೌಕರರ ಫೋಟೋ, ವಿಡಿಯೋ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದರು, ಡಿಸಿ ಜಗದೀಶ್ ಬೆದರಿಕೆಗೆ ಜಗ್ಗದೆ ಫೋಟೋ ತೆಗೆದುಕೊಳ್ಳಿ ಅಂತ ನೌಕರರು ಮುಂದೆ ಬಂದು ನಿಂತುಕೊಂಡರು. ಸಾರಿಗೆ ನೌಕರನ್ನ ಸರ್ಕಾರಿ ನೌಕರನ್ನಾಗಿ ಮಾಡಿ, ವೇತನ ಹೆಚ್ಚಳ ಮಾಡಿ ಅಂತಾ ಆಗ್ರಹಿಸಿದ್ದಾರೆ. ಬಸ್ ನಿಲ್ಲಿಸಿಕೊಂಡು ಬಸ್ ಮುಂದೆ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.