ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ಅವರ ಒಂದೇ ಒಂದು ಮನವಿಗೆ ಭರ್ಜರಿ ಪ್ರತಿಕ್ರೀಯೆ ಸಿಕ್ಕಿದೆ. 2 ದಿನದಲ್ಲಿ ಸರಿಸುಮಾರು 25 ಲಕ್ಷ ಹಣ ಕರ್ನಾಟಕ ಮೃಗಾಲಯಗಳಲ್ಲಿ ಸಂಗ್ರಹವಾಗಿದೆ.
ಕೊರೊನಾ ಬಿಕ್ಕಟ್ಟಿನಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಪ್ರಾಣಿಗಳಿಗೂ ಅಷ್ಟೇ ತೊಂದರೆ ಉಂಟಾಗಿದೆ. ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟವಾಗಿದೆ. ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಿ ಎಂದು ಸ್ಯಾಂಡಲ್ವುಡ್ ನಟ ದರ್ಶನ್ ಮನವಿ ಮಾಡಿದ್ದರು. 2 ದಿನದಲ್ಲಿ ಸರಿಸುಮಾರು 25 ಲಕ್ಷ ಸಂಗ್ರಹವಾಗಿದೆ. ಇದನ್ನೂ ಓದಿ: ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು
Advertisement
View this post on Instagram
Advertisement
ದರ್ಶನ್ ಅಭಿಮಾನಿಗಳು ಹಾಗೂ ಪ್ರಾಣಿಪ್ರಿಯರು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿಯೂ ಪ್ರಾಣಿಗಳನ್ನು ದತ್ತು ಪಡೆಯುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಡಿ ಬಾಸ್ ಮನವಿ ನಂತರ ಕೇವಲ ಎರಡು ದಿನದಲ್ಲಿ 25 ಲಕ್ಷ ಮೌಲ್ಯದ ದತ್ತು ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯ ಮಾಹಿತಿ ನೀಡಿದೆ.
Advertisement
View this post on Instagram
Advertisement
ಕರ್ನಾಟಕದಲ್ಲಿ ಒಟ್ಟು 9 ಮೃಗಾಲಯಗಳಿವೆ. ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರಿನಲ್ಲಿ ಮೃಗಾಲಯಗಳಿವೆ. ದರ್ಶನ್ ಮನವಿಯ ನಂತರ ಈ ಒಂಬತ್ತು ಮೃಗಾಲಯಗಳಿಂದಲೂ 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ದರ್ಶನ್ ಅವರಿಗೆ ಕರ್ನಾಟಕ ಮೃಗಾಲಯ ಧನ್ಯವಾದಗಳನ್ನು ಹೇಳಿದೆ.
ಧನ್ಯವಾದಗಳು ಶ್ರೀ ದರ್ಶನ್ ತೂಗುದೀಪ ರವರಿಗೆ @dasadarshan ಮತ್ತು ಅವರ ಅಭಿಮಾನಿಗಳಿಗೆ. Two days, #25lacs of adoption & donations. ನಿಮ್ಮ ಪ್ರತಿಕ್ರಿಯೆಗೆ ನಮ್ಮ ನಮನಗಳು ???????????? @aranya_kfd @CMofKarnataka @ArvindLBJP @PTI_News @ani_digital @Mysore_Zoo @bannerghattazoo @Shimogazooands1 @CZA_Delhi @ pic.twitter.com/G6hBFoUkT4
— Zoos of Karnataka (@ZKarnataka) June 6, 2021
ಮೃಗಾಯಲಗಳಿಂದ ಪ್ರಾಣಿಗಳನ್ನು ದತ್ತು ಪಡೆದವರ ಹೆಸರು ಮತ್ತು ಮಾಹಿತಿಯನ್ನು ಪ್ರಮಾಣಪತ್ರದ ಸಮೇತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ ದರ್ಶನ್ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತಿದ್ದಾರೆ. ಸಾಕಷ್ಟು ಜನರು ದರ್ಶನ್ ಅವರ ಒಂದೇ ಒಂದು ಮಾತಿಗೆ ಬೆಲ ಕೊಟ್ಟು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.