ಬೆಂಗಳೂರು: ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲುಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ. ಶ್ರೀರಾಮುಲ ಬಳಿಯಲ್ಲಿದ್ದ ಪ್ರಮುಖ ಖಾತೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯನ್ನ ಹಿಂಪಡದುಕೊಳ್ಳಲಾಗಿದೆ. ಶ್ರೀರಾಮುಲು ಬಳಿ ಅವರಿಗೆ ಸಮಾಜ ಕಲ್ಯಾಣ ಇಲಾಖೆಯನ್ನ ನೀಡಲಾಗಿದೆ.
Advertisement
ಶ್ರೀರಾಮುಲ ಅವರ ಬಳಿಯಲ್ಲಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನ ವೈದ್ಯಕೀಯ ಸಚಿವ ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆಯನ್ನ ಸಿಎಂ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಲೋಕಪಯೋಗಿ ಮಾತ್ರ ಉಳಿದಿದೆ. ಖಾತೆ ಬದಲಾವಣೆಗೆ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
Advertisement
ಖಾತೆ ಬದಲಾವಣೆ ಮಾಡುವಂತೆ ಸಿಎಂ ನನಗೆ ಸೂಚಿಸಿದ್ದಾರೆ: ಸುಧಾಕರ್
– ಆರೋಗ್ಯ ಸಚಿವರಾಗಿ ಸುಧಾಕರ್ https://t.co/FbgMLyYhi5
– ರಾಮುಲುಗೆ ಸಮಾಜ ಕಲ್ಯಾಣ ಇಲಾಖೆ#Bengaluru #Sudhakar #HealthMinister #Sriramulu #BSYeddyurappa #KannadaNews
— PublicTV (@publictvnews) October 12, 2020
Advertisement
ಕೋವಿಡ್ ಸೋಂಕು ಆರಂಭದಲ್ಲಿ ಸಚಿವ ರಾಮುಲು ಅವರೇ ಎಲ್ಲವನ್ನು ನಿಭಾಯಿಸುತ್ತಿದ್ದರು. ಆದರೆ ಮಗಳ ಮದುವೆ ಹಿನ್ನೆಲೆಯಲ್ಲಿ ಸ್ವಲ್ಪ ಬಿಡುವು ಪಡೆದುಕೊಂಡಿದ್ರು. ಈ ಹಂತದಲ್ಲಿ ಸಚಿವ ಸುಧಾಕರ್ ಕೊರೊನಾ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ರು. ನಂತರ ರಾಮುಲು ಮತ್ತೆ ಕರ್ತವ್ಯಕ್ಕೆ ವಾಪಸ್ ಆದ್ಮೇಲೆ ಇಬ್ಬರ ನಡ್ವೆ ಕೊರೊನಾ ಉಸ್ತುವಾರಿ ಸಂಬಂಧ ಮುಸುಕಿನ ಗುದ್ದಾಟ ನಡೆದಿತ್ತು. ಇಬ್ಬರು ಒಂದೊಂದು ಹೇಳಿಕೆ ನೀಡಿ ಗೊಂದಲಕ್ಕೆ ಕಾರಣ ಆಗಿದ್ರು, ಕೊರೊನಾ ನಿರ್ವಹಣೆಯಲ್ಲಿ ಶ್ರೀರಾಮುಲು ವಿಫಲವಾದ ಹಿನ್ನೆಲೆ ಖಾತೆ ಬದಲಾವಣೆ ಆಗಿರುವ ಸಾಧ್ಯತೆಗಳು ದಟ್ಟವಾಗಿವೆ.
Advertisement
ಕೊರೊನಾ ನಿಯಂತ್ರಣ ವೈಫಲ್ಯದ ಕಳಂಕ ಕಟ್ಟಬೇಡಿ – ಶ್ರೀರಾಮುಲು ಬೇಸರ https://t.co/mEBNclvz7H#BSYeddyurappa #SriRamulu #CoronaVirus #Covid19 #KannadaNews
— PublicTV (@publictvnews) October 12, 2020