ಬೆಂಗಳೂರು: ಡಿಜೆ ಹಳ್ಳಿ ಗಲಭೆ ಹಿಂದೆ ಇರೋದು ಲೋಕಲ್ ಪಾಲಿಟಿಕ್ಸ್ ಅನ್ನೋದು ಮತ್ತೆ ಮತ್ತೆ ಸ್ಪಷ್ಟವಾಗ್ತಿದೆ. ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಅವರ ವಿರೋಧಿಗಳೆಲ್ಲಾ ಸೇರಿ ಪಿತೂರಿ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿಯವರ ಕೈಯಲ್ಲಿರುವ ಪುಲಕೇಶಿ ಪಟ್ಟಕ್ಕಾಗಿ ಕೇವಲ ಕಾಂಗ್ರೆಸ್ನ ಮಾಜಿ ಮೇಯರ್ ಮಾತ್ರ ಫೈಟ್ ನಡೆಸುತ್ತಿರಲಿಲ್ಲ. ಎಸ್ಡಿಪಿಐ, ಜೆಡಿಎಸ್ನ ಲೋಕಲ್ ನಾಯಕರು ಕೂಡ ಮಸಲತ್ತು ನಡೆಸ್ತಿದ್ದರು ಎಂಬ ಮಾತು ಕೇಳಿಬರುತ್ತಿದೆ.
Advertisement
ಬಿಜೆಪಿಯೇತರರು ಸುಲಭವಾಗಿ ಗೆಲ್ಲುವ ಕ್ಷೇತ್ರಗಳ ಪೈಕಿ ಒಂದಾದ ಪುಲಕೇಶಿ ನಗರದ ಮೇಲೆ ಕಣ್ಣಾಕಿದ್ದ ಮಾಜಿ ಮೇಯರ್ ಸಂಪತ್ರಾಜ್, ತಮ್ಮ ವ್ಯಾಪ್ತಿಗೆ ಬಾರದ ವಾರ್ಡ್ ನಲ್ಲೂ ಹೋಗಿ ರೇಷನ್ ಹಂಚಿಕೆ ಮಾಡಿದ್ರು. ಈ ವಿಚಾರದಲ್ಲಿ ಅಖಂಡ ಮತ್ತು ಸಂಪತ್ರಾಜ್ ನಡುವೆ ಗಲಾಟೆ ಆಗಿ, ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತಿತ್ತು. ಆಗ ನೋಡು, ಮುಂದಿನ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಟಿಕೆಟ್ ತರ್ತೀನಿ ನೋಡ್ತಿರು ಎಂದು ಸವಾಲು ಹಾಕಿದ್ರಂತೆ. ಅಲ್ಲಿಂದ ಶುರುವಾದ ಇಬ್ಬರ ನಡುವಿನ ಕದನ ಇನ್ನೂ ನಿಂತಿಲ್ಲ ಎನ್ನಲಾಗಿದೆ.
Advertisement
Advertisement
ಗಲಭೆಯಲ್ಲಿ ಮೂವರು ಕಾರ್ಪೋರೇಟತಗ ಗಳ ಪಾತ್ರ ಇರೋ ಬಗ್ಗೆ ಸನ್ಮಾನ್ಯ ಮಂತ್ರಿಗಳೊಬ್ಬರಿಗೆ ಅಖಂಡ ಶ್ರೀನಿವಾಸಮೂರ್ತಿ ದೂರು ನೀಡಿದ್ದರು. ಸದ್ಯ ರಾಜಕೀಯ ಒಳಸಂಚಿನ ಬಗ್ಗೆ ಮಾಹಿತಿ ಕಲೆ ಹಾಕ್ತಿರೋ ಸಿಸಿಬಿ, ಮಾಜಿ ಮೇಯರ್ ಸಂಪತ್ರಾಜ್ಗೆ ನೊಟೀಸ್ ಕೊಡಲು ತಯಾರಿ ನಡೆಸಿದೆ. 2 ತಿಂಗಳ ಹಿಂದೆ ಅಖಂಡ ಮಿಸ್ಸಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ನ ವಾಜೀದ್ ಪಾಷಾ ಪೋಸ್ಟ್ ಮಾಡಿದ್ದ. ಇದನ್ನು ಖಂಡಿಸಿ ಅಖಂಡ ಕಡೆಯವರು ದೂರು ನೀಡಿದ್ದರು. ಪೊಲೀಸ್ರು ವಿಚಾರಣೆಗೆ ಇಳಿದ ಕೂಡಲೇ ವಾಜೀದ್ ಕ್ಷಮೆಯಾಚಿಸಿದ್ದರು. ನಂತರ ಪೊಲೀಸರು ಅಖಂಡ ಮತ್ತು ವಾಜೀದ್ರನ್ನು ಕರೆಯಿಸಿ ಸಂಧಾನ ಮಾಡಿದ್ದರು.
Advertisement
ಈ ಶೀತಲ ಸಮರ ಇದು ಇಲ್ಲಿಗೆ ನಿಲ್ಲಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಹೆಚ್ಚಾಗಿತ್ತು. ನವೀನ್ ಅರೆಸ್ಟ್ ವೇಳೆ ಠಾಣೆಗೆ ಬಂದಿದ್ದ ವಾಜೀದ್, ಇದೀಗ ಎಸ್ಕೇಪ್ ಆಗಿದ್ದಾನೆ. ಇನ್ನು ಗಲಭೆಯಲ್ಲಿ ಪುಲಕೇಶಿನಗರ ವಾರ್ಡ್ ಕಾರ್ಪೋರೇಟರ್ ಜಾಕೀರ್ ಪಾತ್ರ ಸಹ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.