– 53ಕ್ಕೂ ಹೆಚ್ಚು ಕ್ರಿಮಿಗಳು ಅಂದರ್
ಬೆಂಗಳೂರು: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮತ್ತೊಬ್ಬ ಆರೋಪಿ ಖಲೀಂ ಪಾಷಾನನ್ನು ಪೊಲೀಸರು ಮಧ್ಯರಾತ್ರಿ ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್
ಕೆಜಿ ಹಳ್ಳಿ ಕಾರ್ಪೊರೇಟರ್ ಪತಿ ಖಲೀಂ ಪಾಷಾನನ್ನು ಬಂಧಿಸಿದ್ದಾರೆ. ಆರೋಪಿ ಖಲೀಂ ಪಾಷಾ ಗಲಭೆಯ ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದನು. ಅಂದರೆ ಗಲಭೆಕೋರರಿಗೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದನು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಮಧ್ಯರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Advertisement
Advertisement
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ, ಡಿಜೆ ಹಳ್ಳಿ ಪೊಲೀಸರು ಮಧ್ಯರಾತ್ರಿ ಅಂದರೆ ಸುಮಾರು 15 ಗಂಟೆಗೆ ಆಪರೇಷನ್ ಕಾರ್ಯಾಚರಣೆ ಮಾಡಲು ಶುರು ಮಾಡಿದ್ದರು. ಅದೇ ರೀತಿ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ ಪೊಲೀಸ್ ಸುತ್ತಾಡಿದ್ದಾರೆ. ರಾತ್ರಿ 12ರಿಂದ ಬೆಳಗಿನ ಜಾವ 4 ಗಂಟೆವರೆಗೆ ಮಿಡ್ನೈಟ್ ಆಪರೇಷನ್ ಮಾಡಿದ್ದಾರೆ.
Advertisement
Advertisement
ಕಿಡಿಕೇಡಿಗಳು ಗಲಭೆ ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಕೊನೆಗೆ ಸಿಸಿಬಿ, ಡಿಜೆ ಪೊಲೀಸರು ವಿಡಿಯೋಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆರೋಪಿಗಳನ್ನು ಗುರುತಿಸಿ ಅವರ ಮನೆಗೆ ಮಧ್ಯರಾತ್ರಿ ಹೋಗಿ ಬಂಧಿಸಿದ್ದಾರೆ.
100ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, 50ಕ್ಕೂ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಇಲ್ಲಿವರೆಗೆ 200ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.