– ಡಿಕೆಶಿ ವರ್ತನೆಗೆ ಜೆಡಿಎಸ್ ಕಾರ್ಯಕರ್ತ ಅಸಮಾಧಾನ
ಮಂಡ್ಯ: ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ ನಮ್ಮ ಜನಾಂಗದ ನಾಯಕ ಡಿಕೆ ಶಿವಕುಮಾರ್ ಎಂದು ಅವರನ್ನು ನೋಡಲು ಹೋಗಿದ್ದೆ. ಆದರೆ ಡಿಕೆಶಿ ಅವರು ಈ ರೀತಿ ವರ್ತನೆ ಮಾಡಿದ್ದು ಸರಿಯಲ್ಲ ಎಂದು ಡಿಕೆಶಿ ಕೈಯಿಂದ ಏಟು ತಿಂದ ತೊರೆಬೊಮ್ಮನಹಳ್ಳಿಯ ಉಮೇಶ್ ಹೇಳಿದ್ದಾರೆ.
Advertisement
ನಿನ್ನೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ನೋಡಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಗೆ ಬಂದಿದ್ದ ಡಿ.ಕೆ ಶಿವಕುಮಾರ್ ಅವರು ಓರ್ವ ವ್ಯಕ್ತಿಯ ತಲೆಗೆ ಹೊಡೆದಿದ್ದರು. ಈ ವಿಚಾರ ಸಂಬಂಧ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
Advertisement
Advertisement
ಈಗ ಡಿಕೆಶಿಯಿಂದ ಏಟು ತಿಂದಿರುವ ಉಮೇಶ್ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಾಂಗ್ರೆಸ್ ಕಾರ್ಯಕರ್ತನಲ್ಲ. ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ ಹಾಗೂ ಮದ್ದೂರು ಶಾಸಕ ತಮ್ಮಣ್ಣ ಅವರ ಅಭಿಮಾನಿಯಾಗಿದ್ದೇನೆ. ಡಿಕೆ ಶಿವಕುಮಾರ್ ಅವರು ನಮ್ಮ ಜನಾಂಗದ ನಾಯಕ ಹಾಗೂ ನಮ್ಮ ಸಂಬಂಧಿ ಎಂಬ ಅಭಿಮಾನಕ್ಕೆ ನಾನು ಅವರನ್ನು ನೋಡಲು ಹೋಗಿದ್ದೆ. ಈ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಅನ್ನಿಸಿತ್ತು, ಆ ಕಾರಣಕ್ಕೆ ನಾನು ಕೈಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿದೆ. ಈ ವೇಳೆ ಕೈ ಬೆನ್ನಿನ ಭಾಗಕ್ಕೆ ತಗುಲಿದೆ, ಅದೇ ಕಾರಣಕ್ಕೆ ಡಿಕೆಶಿ ಅವರು ಹೊಡೆದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ – ಬಿಜೆಪಿ ಟಾಂಗ್
Advertisement
ಡಿಕೆಶಿ ಅವರು ಈ ರೀತಿ ವರ್ತನೆ ಮಾಡಿರುವುದು ಸರಿಯಲ್ಲ. ಅವರ ಘನತೆಗೆ ಈ ವರ್ತನೆ ಶೋಭೆ ತರುವುದಿಲ್ಲ. ಅವರ ಜಾಗದಲ್ಲಿ ಬೇರೆ ಯಾರಿದ್ದರೂ ಪ್ರತಿಭಟನೆ ಮಾಡುತ್ತಿದ್ದೆ, ಅವರ ಸ್ಥಾನಕ್ಕೆ ಗೌರವ ಕೊಟ್ಟು ನಾನು ಸುಮ್ಮನೆ ಇದ್ದೇನೆ. ಮುಂದಿನ ದಿನಗಳಲ್ಲಿ ಅವರ ವರ್ತನೆಯನ್ನು ಬದಲು ಮಾಡಿಕೊಳ್ಳಬೇಕು. ಅಭಿಮಾನಿಗಳು ಹಾಗೂ ಅವರ ಪಕ್ಷದ ಕಾರ್ಯಕರ್ತರ ಮೇಲೆ ಈ ರೀತಿಯ ವರ್ತನೆ ತೋರಬಾರದು ಎಂದು ಉಮೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.