ಡಿಕೆಶಿ ಮನವಿ ಪುರಸ್ಕಾರ – ಸಿಬಿಐ ವಿಚಾರಣೆಯಿಂದ ವಿನಾಯಿತಿ

Public TV
1 Min Read
DK Shivakumar DKSHI 8

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಸಿಬಿಐ ವಿಚಾರಣೆಯಿಂದ ವಿನಾಯಿತಿ ನೀಡಿದೆ.

ಇಂದು ಸಂಜೆ 3.55ಕ್ಕೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್‌ ಹಾಜರಾದರು. ಈ ವೇಳೆ ಡಿಕೆಶಿ ಕಾಂಗ್ರೆಸ್‌ ಹಿರಿಯ ಮುಖಂಡ ಅಹಮದ್‌ ಪಟೇಲ್‌ ಅಂತ್ಯಸಂಸ್ಕಾರಕ್ಕೆ ತೆರಳಬೇಕು. ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. ಸುಮಾರು 45 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಡಿಕೆಶಿ ಮನವಿಯನ್ನು ಪುರಸ್ಕರಿಸಿ ವಿಚಾರಣೆಯಿಂದ ವಿನಾಯಿತಿ ನೀಡಿದರು.

DKShivakumar 1

ಇಂದು ರಾತ್ರಿಯಿಂದ ನವೆಂಬರ್ 29 ಭಾನುವಾರದ ತನಕ ಡಿಕೆ ಶಿವಕುಮಾರ್‌ ಕಾರ್ಯಕ್ರಮವನ್ನು ನಿಗದಿ ಮಾಡಿದ್ದಾರೆ. ಇಂದು ಗುಜರಾತಿನ ವಡೋದರಕ್ಕೆ ರಾತ್ರಿ 7ಕ್ಕೆ ವಿಶೇಷ ವಿಮಾನದಲ್ಲಿ ತೆರಳಲಿರುವ ಡಿಕೆಶಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಡಿಕೆಶಿ ನಾಳೆ ಅಹಮದ್ ಪಟೇಲ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ನಾಳೆ ರಾತ್ರಿ ಗೋವಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಶಿರಸಿ, ಶನಿವಾರ ಉಡುಪಿಯಲ್ಲಿ ತಂಗಲಿರುವ ಡಿಕೆಶಿ ಭಾನುವಾರ ರಾತ್ರಿ ಬೆಂಗಳೂರಿಗೆ ವಾಪಸ್ ಮರಳಲಿದ್ದಾರೆ.

Share This Article