– ಎಡವಟ್ಟು ಬಳಿಕ ‘ಕೈ’ ಮತ್ತೊಮ್ಮೆ ಟ್ವೀಟ್
ಬೆಂಗಳೂರು: ಸಿಡಿ ಪ್ರಕರಣ ಮುಖ್ಯ ಸೂತ್ರಧಾರ ನರೇಶ್ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿರುವ ಬಿಜೆಪಿಗೆ ಇದೀಗ ಕಾಂಗ್ರೆಸ್ ಕೂಡ ಟಾಂಗ್ ನೀಡಿದೆ.
ಸಿಡಿ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ಮಾಜಿ ಪತ್ರಕರ್ತ ಭವಿತ್ ಮತ್ತು ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಫೋಟೋವನ್ನು ಪ್ರಕಟಿಸಿ ತಿರುಗೇಟು ನೀಡಿದೆ.
Advertisement
ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ @BJP4Karnataka
ದೇಶದ್ರೋಹಿ & ಅತ್ಯಾಚಾರಿಯೊಂದಿಗೆ @narendramodi ಅವರಿಗೆ ಏನು ಸಂಬಂಧ?@Tejasvi_Surya ಡ್ರಗ್ ಡೀಲರ್ಗೂ ಏನು ಸಂಬಂಧ?@mepratap ಹಾಗೂ ಈ ಆರೋಪಿಗೂ ಏನು ಸಂಬಂಧ?@LaxmanSavadi & ಯುವರಾಜನಿಗೂ ಏನು ಸಂಬಂಧ?
ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? https://t.co/OjOlKk4kHu pic.twitter.com/70voo4asIF
— Karnataka Congress (@INCKarnataka) March 17, 2021
Advertisement
ಈ ಸಂಬಂಧ ಫೋಟೋಗಳ ಜೊತೆ ಬರೆದುಕೊಂಡಿರುವ ಕರ್ನಾಟಕ ಕಾಂಗ್ರೆಸ್, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿಯವರೇ ದೇಶದ್ರೋಹಿ & ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿಯವರಿಗೆ ಏನು ಸಂಬಂಧ? ತೇಜಸ್ವಿ ಸೂರ್ಯ ಗೂ ಡ್ರಗ್ ಡೀಲರ್ಗೂ ಏನು ಸಂಬಂಧ?, ಪ್ರತಾಪ್ ಸಿಂಹನಿಗೂ ಏನು ಸಂಬಂಧ?, ಲಕ್ಷ್ಮಣ್ ಸವದಿಗೂ ಯುವರಾಜನಿಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು ಎಂದು ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್ ಗುದ್ದು ನೀಡಿದೆ.
Advertisement
ಟ್ವೀಟ್ ಎಡವಟ್ಟು:
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕಾಂಗ್ರೆಸ್, ಬಿಜೆಪಿಗೆ ಟಾಂಗ್ ಕೊಡುವ ಭರದಲ್ಲಿ ವಿಚಾರಣೆಗೆ ಒಳಪಡಿಸಿದ ವ್ಯಕ್ತಿಯನ್ನ ಬಂಧಿತ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿತ್ತು. ತಮ್ಮ ತಪ್ಪಿನ ಅರಿವಾಗಿ ಕೂಡಲೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೆ ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ. ಅಲ್ಲದೆ ಹೊಸ ಟ್ವೀಟ್ ನಲ್ಲಿ ಲಕ್ಷ್ಮಣ ಸವದಿ ಮತ್ತು ವಂಚಕ ಯುವರಾಜ ಸ್ವಾಮಿ ಜೊತೆ ಇರುವ ಫೋಟೋವನ್ನು ಸೇರಿಸಿದೆ.
Advertisement
ಬಿಜೆಪಿ ಟ್ವೀಟ್ ಮಾಡಿದ್ದೇನು..?
ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್ನಲ್ಲಿ ಎಂದು ಹೇಳಿ ಬಿಜೆಪಿ ಸಿಡಿ ಪ್ರಕರಣ ಮುಖ್ಯ ಸೂತ್ರಧಾರ ನರೇಶ್ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿತ್ತು. ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ‘ಮಾಸ್ಟರ್ ಮೈಂಡ್’ ಮತ್ತು ‘ರಿಂಗ್ ಮಾಸ್ಟರ್’ ಒಂದೇ ಫ್ರೇಮ್ನಲ್ಲಿ ಸಿಲುಕಿಕೊಂಡಿರುವುದಕ್ಕೂ ‘ನನ್ನನ್ನು ಸಿಲುಕಿಸುವ ಕುತಂತ್ರ’ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ಎಂದು ಬಿಜೆಪಿ ಪ್ರಶ್ನಿಸಿತ್ತು.
ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ.
ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ? pic.twitter.com/bItxY8U7At
— BJP Karnataka (@BJP4Karnataka) March 16, 2021
ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡುತ್ತಿದೆ. ಆ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ನಿನ್ನೆ ಟ್ವೀಟ್ ಮಾಡಿತ್ತು.