ನವದೆಹಲಿ: ಕಾಂಗ್ರೆಸ್ನ ಹಲವು ನಾಯಕರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಸಿಡಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ನಮಗೆ ಸಂಸತ್ನಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಭರವಸೆ ಬೆಳಕಾಗಿ ಟ್ವಿಟ್ಟರ್ ಇದೆ ಎಂದು ಭಾವಿಸಿದ್ದೆ. ಆದರೆ ಟ್ವಿಟ್ಟರ್ ಆ ರೀತಿ ಇಲ್ಲ ಎಂದು ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಟ್ವಿಟ್ಟರ್ ನಿಷ್ಪಕ್ಷಪಾತ, ವಸ್ತುನಿಷ್ಠ ವೇದಿಕೆಯಾಗಿ ಇಲ್ಲ. ಅದು ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ. ನಮ್ಮ ರಾಜಕೀಯವನ್ನು ನಾವೇ ನಿರ್ಧರಿಸಬೇಕೋ ಬೇರೆಯವರೋ ಎಂದು ಭಾರತೀಯರಾಗಿ ನಾವು ಪ್ರಶ್ನೆ ಕೇಳಬೇಕು. ಬ್ಯುಸಿನೆಸ್ ನಡೆಸುವ ಕಂಪನಿಯು ನಮ್ಮ ರಾಜಕೀಯವನ್ನು ನಿರ್ಧರಿಸಲು ಯತ್ನಿಸುತ್ತಿರುವುದನ್ನು ಒಪ್ಪಲಾಗದು ಎಂದಿದ್ದಾರೆ. ಇದನ್ನೂ ಓದಿ: BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ
Advertisement
ಟ್ವಿಟ್ಟರ್ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ನಮಗೆ ಪಾರ್ಲಿಮೆಂಟ್ನಲ್ಲಿ ಮಾತನಾಡಲು ಅವಕಾಶ ಕೊಡದ ಸರ್ಕಾರದ ನಡೆಗೂ ಇದಕ್ಕೂ ವ್ಯತ್ಯಾಸ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Advertisement
Is Twitter following its own policy for the suspension of Congress leaders’ accounts or the Modi government’s?
Why hadn’t it locked the account of SC commission that had tweeted similar photos before any of our leaders did? 1/2
— Priyanka Gandhi Vadra (@priyankagandhi) August 12, 2021
ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಕೈ ಜೋಡಿಸುವ ಮೂಲಕವಾಗಿ ಪ್ರಜಾತಂತ್ರವನ್ನು ಹತ್ತಿಕ್ಕುವ ಕೃತ್ಯದಲ್ಲಿ ಟ್ವಿಟ್ಟರ್ ಭಾಗಿಯಾಗಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಖಾತೆಗಳನ್ನು ಅಮಾನತು ಮಾಡಿರುವ ಟ್ವಿಟ್ಟರ್ ತನ್ನದೇ ನಿಯಮ ಪಾಲಿಸುತ್ತಿದೆಯಾ ಅಥವಾ ಮೋದಿ ಸರ್ಕಾರದ ನೀತಿ ಅನುಸರಿಸುತ್ತಿದೆಯಾ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದಾರೆ.
By locking Congress leaders’ accounts en masse, Twitter is blatantly colluding with the stifling of democracy by the BJP government in India. 2/2
— Priyanka Gandhi Vadra (@priyankagandhi) August 12, 2021
ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಮನೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈ ಕುರಿತು ಬಾಲಕಿಯ ಪೋಷಕರ ಜೊತೆಗಿನ ಚಿತ್ರ ಹಂಚಿಕೊಂಡು ಟ್ವೀಟ್ ಮಾಡಿದ್ದರು. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಟ್ವಿಟ್ಟರ್ಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಕುರಿತು ಮಾಹಿತಿ ನೀಡಿ ಫೋಕ್ಸೋ ಕಾಯ್ದೆ ಉಲ್ಲಂಘಿಸಿ ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ ಖಾತೆಯನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಟ್ವಿಟ್ಟರ್ ತಿಳಿಸಿದೆ. ಇದನ್ನೂ ಓದಿ: ಪ್ರೀತಂ ಬಗ್ಗೆ ಪ್ರಶ್ನೆಗಳನ್ನು ಕೇಳ್ಬೇಡಿ, ಅಷ್ಟು ಕೆಳಮಟ್ಟಕ್ಕೆ ನನ್ನ ಇಳಿಸ್ಬೇಡಿ: ಹೆಚ್ಡಿಡಿ
View this post on Instagram
ಯಾರೆಲ್ಲ ಖಾತೆ ಬ್ಲಾಕ್?
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ, ಕೆ ಸಿ ವೇಣುಗೋಪಾಲ್, ಅಜಯ್ ಮಕೇನ್, ಪಕ್ಷದ ಸಚೇತಕ ಮಣಿಕ್ಕಮ್ ಠಾಕೋರ್, ಅಸ್ಸಾಂ ಕಾಂಗ್ರೆಸ್ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಖಾತೆಗಳನ್ನು ಸಹ ಬ್ಲಾಕ್ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಸೇರಿದಂತೆ ನಾಯಕರ ಟ್ವಿಟ್ಟರ್ ಖಾತೆ ಬ್ಲಾಕ್
ರಾಹುಲ್ ಗಾಂಧಿ ಖಾತೆ ಸಸ್ಪೆಂಡ್ ಬೆನ್ನಲ್ಲೇ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯೂ ಲಾಕ್ ಆಗಿದೆ. ಹೀಗೆಂದು ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಡಿರುವ ಕಾಂಗ್ರೆಸ್ ಟ್ವಿಟ್ಟರ್ ಸಂಸ್ಥೆ ವಿರುದ್ಧವಾಗಿ ಕೆಂಡಕಾರಿದೆ.