ಟೋಕಿಯೋ: ವಿಶ್ವದ ಸಾವಿರಾರು ಕ್ರೀಡಾಪಟುಗಳು ಒಂದೆಡೆ ಸೇರುವ ಕ್ರೀಡಾ ಜಾತ್ರೆ ಜಪಾನ್ನ ಟೋಕಿಯೋದಲ್ಲಿ ಆರಂಭವಾಗಿದೆ. ಈ ಬಾರಿಯ ಒಲಿಪಿಂಕ್ಸ್ ಹಲವು ವಿಶೇಷತೆಯಿಂದ ಕೂಡಿದ್ದು, ಪ್ರಮುಖವಾಗಿ ಹಿಂದಿದ್ದಂತಹ ವಿಜಯ ವೇದಿಕೆಯ ಸಂಭ್ರಮ ಈ ಬಾರಿ ಸ್ವಲ್ಪ ಕಳೆಗುಂದಲಿದೆ.
Advertisement
ಈ ಹಿಂದಿನ ಎಲ್ಲಾ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ವಿಜಯ ವೇದಿಕೆಗೆ ಏರಿ ಸಂಭ್ರಮ ಪಡುತ್ತಿದ್ದರು. ಆದರೆ ಈ ಬಾರಿ ವಿಜಯ ವೇದಿಕೆಯ ಸಂಭ್ರಮ ಅಷ್ಟು ಸಿಗಲಾರದು. ಪ್ರತಿ ವರ್ಷ ವಿಜೇತರು ವಿಜಯವೇದಿಕೆ ಏರಿ ಪದಕ್ಕಾಗಿ ಕೊರಳೊಡ್ಡುತ್ತಿದ್ದರು. ಅತಿಥಿಗಳು ಪದಕ ಪ್ರಧಾನ ಮಾಡುತ್ತಿದ್ದರು. ಆದರೆ ಈ ಭಾರಿ ವಿಜೇತರೆ ತಮ್ಮ ಕೊರಳಿಗೆ ತಮ್ಮ ಪದಕ ಧರಿಸುವಂತಾಗಿದೆ. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ
Advertisement
Advertisement
ಹೌದು ಕೊರೊನಾದಿಂದಾಗಿ ಒಂದು ವರ್ಷಗಳ ಬಳಿಕ ಆರಂಭವಾದ ಟೋಕಿಯೋ ಒಲಿಂಪಿಕ್ಸ್ ಗೆ ಕೊರೊನಾ ಕಾಟ ಕೊಡುತ್ತಿದೆ. ಹಲವು ದೇಶದ ಕ್ರೀಡಾಪಟುಗಳು ಅಂತಿಮ ಕ್ಷಣದಲ್ಲಿ ಕೊರೊನಾದಿಂದಾಗಿ ಹೊರ ಬಿದ್ದಿದ್ದಾರೆ. ಈ ನಡುವೆ ಹೊಸ ನಿಯಮದಂತೆ ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಒಲಿಂಪಿಕ್ಸ್ ನಡೆಸಲು ಒಲಿಂಪಿಕ್ಸ್ ಮಂಡಳಿ ನಿರ್ಧರಿಸಿದೆ. ಹಾಗಾಗಿ ಪ್ರತಿವರ್ಷದಂತೆ ಇದ್ದಂತಹ ವಿಜಯ ವೇದಿಕೆಯ ಸಂಭ್ರಮ ಈ ಬಾರಿ ಕಾಣಸಿಗದಾಗಿದೆ.
Advertisement
ಈ ಹಿಂದೆ ಪದಕ ಗೆದ್ದ ಅಥ್ಲೀಟ್ಸ್ಗಳು ಬಂದು ವಿಜಯ ವೇದಿಕೆಗೆ ಏರಿ ಅಲ್ಲಿ ಅತಿಥಿಗಳಿಂದ ಪದಕ ಹಾಕಿಸಿಕೊಂಡು ಕೈ ಕುಲುಕಿ, ಅಪ್ಪಿಕೊಂಡು ಸಂಭ್ರಮಪಡುತ್ತಿದ್ದರು. ಆದರೆ ಈ ಬಾರಿ ಈ ಸಂಭ್ರಮವಿಲ್ಲ. ಪದಕ ಗೆದ್ದವರು ಸಾಮಾಜಿಕ ಅಂತರ ಕಾಯ್ದುಕೊಂಡು ರೂಪಿಸಿರುವ ವಿಜಯ ವೇದಿಕೆಯ ಬಳಿ ತೆರಳಿ ಮುಂದೆ ಇಟ್ಟಿರುವ ಮೂರು ಪದಕಗಳಲ್ಲಿ ತಮಗೆ ಸಿಕ್ಕಿರುವ ಪದಕ ಧರಿಸಿ ನಿಲ್ಲಬೇಕು. ಇದನ್ನು ಹೊರತು ಪಡಿಸಿ ಸಹ ವಿಜೇತರಿಗೂ ಕೂಡ ಕ್ರೀಡಾಪಟುಗಳು ಕೈ ಕುಲುಕಿ ಅಭಿನಂದಿಸುವ ಕ್ರಮವನ್ನು ನಿಷೇಧಿಸಲಾಗಿದೆ. ಹಾಗಾಗಿ ಈ ಬಾರಿ ವಿಜಯ ವೇದಿಕೆ ತನ್ನ ಹಳೆಯ ಖದರ್, ಕಳೆದುಕೊಂಡಂತಾಗಿದೆ.