– ಪ್ರಯಾಣಿಕರು ಮೃತಪಟ್ಟಿರುವ ಶಂಕೆ
– ಮೀನುಗಾರರಿಗೆ ದೊರೆತ ವಿಮಾನದ ಅವಶೇಷಗಳು
ಜಕಾರ್ತ: ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಟೇಕ್ ಆಫ್ ಆದ 4 ನಿಮಿಷದಲ್ಲೇ ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನವಾಗಿದೆ.
Advertisement
Advertisement
ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದು ಹಾರಾಟ ಆರಂಭಿಸಿದ ನಾಲ್ಕೇ ನಿಮಿಷದಲ್ಲಿ ಸಂಪರ್ಕ ಕಡಿತವಾಗಿಸಿಕೊಂಡು ನಾಪತ್ತೆಯಾಗಿತ್ತು. ಇದೀಗ ಈ ವಿಮಾನ ಸಮುದ್ರದಲ್ಲ ಪತನವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.
Advertisement
10 ಸಾವಿರ ಅಡಿಯಿಂದ ವಿಮಾನ ಸಮುದ್ರಕ್ಕೆ ಬಿದ್ದಿದ್ದೆ ಎಂದು ಹೇಳಲಾಗುತ್ತಿದೆ. ಈ ವಿಮಾನದಲ್ಲಿ 62 ಜನ ಪ್ರಯಾಣಿಸುತ್ತಿದ್ದರು. ಸಮುದ್ರಕ್ಕೆ ವಿಮಾನ ಬಿದ್ದಿರುವ ಹಿನ್ನೆಲೆ ಬದುಕುಳಿದಿರುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಈ ಘಟನೆಯ ಕುರಿತಾಗಿ ಇಂಡೋನೇಷೀಯಾ ಸರ್ಕಾರವು ಅಧಿಕೃತವಾದ ಮಾಹಿತಿಯನ್ನು ನೀಡಿಲ್ಲ.
Advertisement
Sriwijaya Air flight #SJ182 lost more than 10.000 feet of altitude in less than one minute, about 4 minutes after departure from Jakarta.https://t.co/fNZqlIR2dz pic.twitter.com/MAVfbj73YN
— Flightradar24 (@flightradar24) January 9, 2021
ಮೀನುಗಾರರಿಗೆ ವಿಮಾನದ ಅವಶೇಷಗಳು ದೊರೆತಿವೆ. ಈ ಹೀಗಾಗಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಸಿಕ್ಕಿರುವ ಅವಶೇಷಗಳು ನಾಪತ್ತೆಯಾಗಿರುವ ವಿಮಾನಕ್ಕೆ ಸೇರಿದ ವಸ್ತುಗಳಾ ಎಂಬುದಕ್ಕೆ ನಿಖರವಾದ ಮಾಹಿತಿಲ್ಲ. ಕೇಬಲ್, ಹರಿದ ಜೀನ್ಸ್ ಪ್ಯಾಂಟಿನ ತುಂಡು, ಲೋಹದ ಅವಶೇಷಗಳು, ನೀರಿನಲ್ಲಿ ತೇಲುತ್ತಿದ್ದವು. ಹೀಗಾಗಿ ಮೀನಿಗಾರರಿಗೆ ನೂರ್ಹಾಸನ್ ದ್ವೀಪದಲ್ಲಿ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Flight #SJ182 was operated by a Boeing 737-500 “classic” with registration number PK-CLC (MSN 27323). First flight for this aircraft was in May 1994 (26 years old). pic.twitter.com/2rakDifhTm
— Flightradar24 (@flightradar24) January 9, 2021
ಮಳೆ ಇರುವ ಕಾರಣದಿಂದಾಗಿ ವಿಮಾನ ನಿಲ್ದಾಣದಿಂದ 30 ನಿಮಿಷಗಳ ಕಾಲ ವಿಳಂಬವಾಗಿ ಹೊರಟ್ಟಿತ್ತು. ಕಾಲಿಮಂತನ್ ಪ್ರಾಂತ್ಯದಿಂದ ಪಾಂಟಿಯಾನಾಕ್ಗೆ ಹೊರಡಲು ಟೇಕ್ ಆಫ್ ಆಗಿರುವ ಕೆಲವೆ ನಿಮಿಷಗಳಲ್ಲಿ ನಾಪತ್ತೆಯಾದೆ. ಈ ವಿಮಾನ 26 ವರ್ಷ ಹಳೆಯ ವಿಮಾನವಾಗಿತ್ತು. 2018 ರಲ್ಲಿ ನಡೆದ ಜಕಾರ್ತ ಲಯನ್ ವಿಮಾನ ಪತನವಾಗಿ 189 ಮಂದಿ ಸಾವನ್ನಪ್ಪಿದ್ದರು. 2014ರಲ್ಲಿ ಇಂಡೋನೇಷ್ಯಾದ ಸುರಬಯಾದಿಂದ ಸಿಂಗಾಪುರಕ್ಕೆ ತೆರಳಿದ್ದ ಏರ್ ಏಷ್ಯಾ ವಿಮಾನ ಸಮುದ್ರಕ್ಕೆ ಅಪ್ಪಳಿಸಿ 162 ಮಂದಿ ಸಾವಿಗೀಡಾಗಿದ್ದರು.