KarnatakaKolarLatestMain PostUncategorized

5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ

Advertisements

ಕೋಲಾರ: ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾರಾರಿ ನಡೆದಿದೆ.

ಜಿಲ್ಲೆಯ ಮುಳುಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಚಿಲ್ಲರೆ ಹಣಕ್ಕಾಗಿ ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮತ್ತು ಪ್ರಯಾಣಿಕ ಹೊಡೆದಾಡಿಕೊಂಡಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದರು. ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ. ಈ ವೇಳೆ ನಿರ್ವಾಹಕ ಐದು ರೂಪಾಯಿ ಚಿಲ್ಲರೆ ಇಲ್ಲ ಎಂದ ಹೇಳಿದ್ದಾರೆ.

ಐದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಮಾತ್ರವಲ್ಲದೆ, ನಡು ರಸ್ತೆಯಲ್ಲಿ ಇಬ್ಬರೂ ಹೊಡೆದಾಡಿದ್ದಾರೆ. ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Back to top button