Connect with us

Bollywood

ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ‘ರಣವಿಕ್ರಮ’ ಬೆಡಗಿ

Published

on

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ ಅದಾ ಶರ್ಮಾ ಲಾಕ್‍ಡೌನ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಚಾಲೆಂಜ್ ಹಾಕಿ ಕೆಲಸ ಕೊಡುತ್ತಿದ್ದಾರೆ. ಅದರಲ್ಲೂ ಆಗಾಗ ಅವರು ಶೇರ್ ಮಾಡುವ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಇತ್ತೀಚೆಗೆ ಪಾರ್ಟಿ ವಿಥ್ ಪಾಟಿ ಎಂದು ಸ್ಟೆಪ್ ಹಾಕಿದ್ದ ಅದಾ ಈಗ ಟವೆಲ್ ಕಟ್ಟಿಕೊಂಡು ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ. ಹೌದು. ಟವೆಲ್ ಕಟ್ಟಿಕೊಂಡ ಅದಾ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅದಾ ಶರ್ಮಾ, ಬಾತ್ ಟವೆಲ್ ಸುತ್ತಿಕೊಂಡು ಕಾಲಿನ ಎರಡು ಬೆರಳು ಒಂದು ಕಡೆ, ಉಳಿದ ಮೂರು ಬೆರಳು ಇನ್ನೊಂದು ಕಡೆ ಸ್ಪಿಲ್ಟ್ ಮಾಡಿದ್ದಾರೆ. ನೀವು ಹೀಗೆ ಮಾಡಬಲ್ಲಿರಾ ಅಂತ ಅಭಿಮಾನಿಗಳಿಗೆ ತಮ್ಮ ಫೋಟೋವನ್ನು ಶೇರ್ ಮಾಡಿ ಸವಾಲ್ ಹಾಕಿದ್ದಾರೆ.

ಆದರೆ ಅದಾ ಹಾಕಿರುವ ಸವಾಲಿಗಿಂತ ಅವರ ಬೋಲ್ಡ್ ಫೋಟೋಗಳೇ ನೆಟ್ಟಿಗರನ್ನು ಆಕರ್ಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅದಾ ಹೆಚ್ಚಾಗಿ ಹಾಟ್ ಫೋಟೋಗಳನ್ನೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ಜೊತೆಗೆ ಅದಾ ಅವರ ಹಲವು ವಿಡಿಯೋಗಳು ಕೂಡ ವೈರಲ್ ಆಗುತ್ತಲೇ ಇರುತ್ತದೆ.

ಬಾಲಿವುಡ್‍ನ 1920 ಹಾರರ್ ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಅದಾ ಬಿಟೌನ್‍ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಕೂಡ ಅದಾ ನಟಿಸಿ ಮೋಡಿ ಮಾಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್‍ನಲ್ಲಿ ಪವರ್ ಸ್ಟಾರ್ ಗೆ ಜೋಡಿ ಆಗಿ ರಣವಿಕ್ರಮ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಸದ್ಯ ಮ್ಯಾನ್ ಟು ಮ್ಯಾನ್ ಸಿನಿಮಾದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in