ವಿಯೆನ್ನಾ: ಜೋರಾಗಿ ಹೂಸು ಬಿಟ್ಟ ವ್ಯಕ್ತಿಯೊಬ್ಬ 43 ಸಾವಿರ ರೂ. ದಂಡ ಕಟ್ಟಿದ ಪ್ರಸಂಗವೊಂದು ಆಸ್ಪ್ರಿಯಾ ದೇಶದ ವಿಯೆನ್ನಾದಲ್ಲಿ ನಡೆದಿದೆ.
ವಿಯೆನ್ನಾ ಪೊಲೀಸರು ಈ ತಿಂಗಳ ಆರಂಭದಲ್ಲಿ ನಾಕಾಬಂದಿ ವೇಳೆ ತಪಾಸಣೆ ನಡೆಸಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ಜೋರಾಗಿ ಹೂಸು ಬಿಟ್ಟಿದ್ದಾನೆ. ಪರಿಣಾಮ ವಾಸನೆ ತಡೆಯಲಾರದೇ ಕೋಪಗೊಂಡ ಪೊಲೀಸರು 500 ಯುರೋ (43 ಸಾವಿರ ರೂ.) ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ
Advertisement
Advertisement
ವ್ಯಕ್ತಿಯು ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ. ಹೀಗಾಗಿ ದಂಡ ಹಾಕಲಾಗಿದೆ ಎಂದು ವಿಯೆನ್ನಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಕಿಡಿಕಾರಿರುವ ವ್ಯಕ್ತಿಯು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾನೆ. ಆದರೆ ಕೆಲ ನೆಟ್ಟಿಗರು ವ್ಯಕ್ತಿಯ ಪರಿಸ್ಥಿತಿಯನ್ನು ಕಂಡು ನಕ್ಕು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹೂಸು ವಾಸನೆ ತಾಳಲಾರದೆ ಕಲಾಪ ಮುಂದೂಡಿಕೆ
Advertisement
ವ್ಯಕ್ತಿಯ ಆರೋಪಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿರುವ ವಿಯೆನ್ನಾ ಪೊಲೀಸರು, ವ್ಯಕ್ತಿ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾನೆ. ಒಂದು ವೇಳೆ ದಂಡದ ಹಣವನ್ನು ವಾಪಸ್ ಪಡೆಬೇಕಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.