– ಹೆತ್ತವರು ಕೈಕೊಟ್ಟಾಗ ಸ್ನೇಹಿತನಾದ ‘ಡ್ಯಾನಿ’
– ಸದ್ಯ ಪೊಲೀಸರ ಆರೈಕೆಯಲ್ಲಿದ್ದಾನೆ ಅಂಕಿತ್
ಲಕ್ನೋ: ತಂದೆ ಜೈಲಿಗೆ ಹೋದರೆ, ತಾಯಿ ಮಗಗನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ವಾಸಿಸಲು ಮನೆ ಇಲ್ಲದೆ ಪುಟ್ಟ ಹುಡುಗನೊಬ್ಬ ತನ್ನ ಮುದ್ದಿನ ಶ್ವಾನದೊಂದಿಗೆ ರಸ್ತೆ ಬದಿ ಮಲಗುತ್ತಿರುವ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಬಾಲಕನನ್ನು ಅಂಕಿತ್ ಎಂದು ಗುರುತಿಸಲಾಗಿದೆ. ಈತನ ತಂದೆ ತಂದೆ ಜೈಲಿನಲ್ಲಿದ್ದಾರೆ. ಈ ಮಧ್ಯೆ ತಾಯಿಯೂ ಅಂಕಿತ್ನನ್ನು ದೂರ ಮಾಡಿದ್ದಾರೆ. ಹೀಗಾಗಿ ಬಾಲಕ ಯಾರೂ ಇಲ್ಲದೇ ಜೀವನ ನಡೆಸಲು ಬಲೂನುಗಳನ್ನು ಮಾರಾಟ, ಟೀ ಸ್ಟಾಲ್ಗಳಲ್ಲಿ ಕೆಲಸ ಮಾಡುವ ಮೂಲಕ ಜೀವನ ನಡೆಸುತ್ತಿದ್ದನು. ಆಗ ಅಂಕಿತ್ ಏಕೈಕ ಸ್ನೇಹಿತನಾಗಿದ್ದು ಡ್ಯಾನಿ ಎಂಬ ಶ್ವಾನ. ಬಾಲಕ ಇದರೊಂದಿಗೆ ಕಾಲ ಕಳೆಯಲು ಆರಂಭಿಸಿದ್ದಾನೆ. ಫುಟ್ಪಾತ್ಗಳಲ್ಲಿ ತನ್ನ ಸ್ನೇಹಿತ ನಾಯಿಯೊಂದಿಗೆ ಪ್ರತಿನಿತ್ಯ ಮಲಗುತ್ತಾನೆ. ಈ ಡ್ಯಾನಿ ಯಾವಾಗಲೂ ಅಂಕಿತ್ನೊಂದಿಗೆ ಇರುತ್ತದೆ. ಕಳೆದ ಕೆಲ ವರ್ಷಗಳಿಂದ ಅಂಕಿತ್ ಏನು ಸಂಪಾದಿಸುತ್ತಾನೋ ಅದರಲ್ಲಿ ತಾನೂ ಆಹಾರ ಸೇವಿಸುವುದರ ಜೊತೆಗೆ ಡ್ಯಾನಿಗೂ ಆಹಾರವನ್ನು ಕೊಡುತ್ತಿದ್ದನು.
Advertisement
Advertisement
ಕಳೆದ ಕೆಲವು ದಿನಗಳ ಹಿಂದೆ ಮುಚ್ಚಿದ ಅಂಗಡಿಯೊಂದರ ಹೊರಗೆ ರಾತ್ರಿ ಕಂಬಳಿ ಹೊದ್ದು ಮಲಗಿದ್ದ ಅಂಕಿತ್ ಮತ್ತು ಡ್ಯಾನಿಯ ಫೋಟೋವನ್ನು ಯಾರೋ ಕ್ಲಿಕ್ಕಿಸಿ ಸೋಷಿಲ್ ಮೀಡಿಯಾದಲ್ಲಿ ಹಾಕಿ ವೈರಲ್ ಮಾಡಿದ್ದಾರೆ. ಅಂದಿನಿಂದ ಬಾಲಕನನ್ನು ಪತ್ತೆ ಹಚ್ಚಲು ಮುಜಫರ್ ನಗರ ಎಸ್ಎಸ್ಪಿ ಅಭಿಷೇಕ್ ಯಾದವ್ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಆತನನ್ನು ಹುಡಕುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ. ಅಂಕಿತ್ ಈಗ ಪೊಲೀಸರ ಆರೈಕೆಯಲ್ಲಿದ್ದಾನೆ.
Advertisement
ಅಂಕಿತ್ ಕೆಲಸ ಮಾಡುತ್ತಿದ್ದ ಟೀ ಸ್ಟಾಲ್ ಮಾಲೀಕರು ಹೇಳುವ ಪ್ರಕಾರ ಅಂಕಿತ್ ಕೆಲಸ ಮಾಡಿ ಮುಗಿಸುವವರೆಗೂ ನಾಯಿ ಒಂದೂ ಮೂಲೆಯಲ್ಲಿ ಕುಳಿತು ಅಂಕಿತ್ಗಾಗಿ ಕಾಯುತ್ತಿರುತ್ತದೆ. ಅಂಕಿತ್ ಸ್ವಾಭಿಮಾನಿ ಎಂದಿಗೂ ಏನನ್ನೂ ಉಚಿತವಾಗಿ ಯಾರಿಂದಲೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Advertisement
ಅಂಕಿತ್ ಕುಟುಂಬಸ್ಥರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದೇವೆ. ಅಂಕಿತ್ ಫೋಟೋವನ್ನು ಪಕ್ಕದ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ನಾವು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಿದ್ದೇವೆ. ಸ್ಥಳೀಯ ಪೊಲೀಸರು ಶಾಲಾ ಆಡಳಿತ ಮಂಡಳಿಯೊಂದಿಗೆ ಮನವಿ ಮಾಡಿದ ನಂತರ ಶಾಲೆ ಅವರಿಗೆ ಉಚಿತ ಶಿಕ್ಷಣ ನೀಡಲು ಒಪ್ಪಿದೆ. ಹೀಗಾಗಿ ಅಂಕಿತ್ ಇರುವ ಸ್ಥಳ ಕಂಡು ಬರುವವರೆಗೂ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಾನೆ ಎಂದು ನಗರದ ಕೊಟ್ವಾಲಿ ಎಸ್ಎಚ್ಒ ಅನಿಲ್ ಕಪರ್ವಾನ್ ತಿಳಿಸಿದ್ದಾರೆ.