-ಬಾಗಿಲು ಒಡೆದ ನಂತ್ರ ನನ್ನನ್ನ ಕಳಿಸಿಬಿಟ್ರು
ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಶವವಿದ್ದ ಕೋಣೆಯ ಬಾಗಿಲು ಒಡೆದ ಬೀಗ ರಿಪೇರಿಗಾರ ಅಂದು ನಡೆದ ಘಟನೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಂದು ಬಾಗಿಲು ಒಡೆದ ರಫಿ ಶೇಖ್ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಶವದ ಮುಂದೆ ಕಣ್ಣೀರಿಟ್ಟು ರಿಯಾ ಕ್ಷಮೆ ಕೇಳಿದ್ಯಾಕೆ?
ಅಂದು ಬೆಡ್ರೂಮ್ ಬೀಗ ಒಡೆಯಬೇಕೆಂದು ನನ್ನನ್ನು ಕರೆಸಲಾಗಿತ್ತು. ಕಂಪ್ಯೂಟೈರೈಸ್ಡ್ ಲಾಕ್ ಆಗಿದ್ದರಿಂದ 1,500 ರೂ.ಯಿಂದ 2 ಸಾವಿರ ನೀಡಬೇಕೆಂದೆ. ಮನೆಯಲ್ಲಿದ್ದ ನಾಲ್ವರು ಹಣ ನೀಡಲು ಒಪ್ಪಿಕೊಂಡರು. ಚಾಕು ಮತ್ತು ಸುತ್ತಿಗೆ ಬಳಸಿ ಲಾಕ್ ಮುರಿದೆ. ಬಾಗಿಲು ತೆರೆಯುತ್ತಿದ್ದಂತೆ ನಿನ್ನ ಸಾಮಾನುಗಳು ತೆಗೆದುಕೊಂಡು ಹೋಗು ಎಂದು ಒಬ್ಬರು ಹೇಳಿದ್ರು. ಕೋಣೆಯೊಳಗೆ ನನಗೆ ನೋಡಲು ಅವಕಾಶ ನೀಡಲಿಲ್ಲ. ಅಲ್ಲಿದ್ದ ನಾಲ್ವರು ಹೆಸರು ನನಗೆ ಗೊತ್ತಿಲ್ಲ. ಕೋಣೆಯೊಳಗೆ ಏನಿತ್ತು ಎಂಬುದನ್ನ ನಾನು ನೋಡಲಿಲ್ಲ ಎಂದು ರಫಿ ಶೇಖ್ ಹೇಳಿದ್ದಾರೆ. ಇದನ್ನೂ ಓದಿ: ತನಿಖೆ ಯಾರೇ ನಡೆಸಲಿ, ಸತ್ಯ ಬದಲಾಗಲ್ಲ: ರಿಯಾ ಚಕ್ರವರ್ತಿ ಪರ ವಕೀಲ
Advertisement
Advertisement
ನಾನು ಬೀಗ ಒಡೆಯುವಾಗ ನಾಲ್ವರು ಹೊರತು ಪಡಿಸಿದ್ರೆ ಪೊಲೀಸರು ಇರಲಿಲ್ಲ. ಮಧ್ಯಾಹ್ನ ಸುಮಾರು 1.30 ರಿಂದ 1.45ಕ್ಕೆ ನಾನು ಆ ಮನೆಗೆ ಹೋಗಿದ್ದೆ. ಕಟ್ಟಡದ ಆರನೇ ಅಂತಸ್ತಿನಲ್ಲಿರುವ ಡೂಪ್ಲೆಕ್ಸ್ ಮನೆ ಅದಾಗಿತ್ತು. ಅಲ್ಲಿಂದ ಬಂದ ಒಂದು ಗಂಟೆಯ ನಂತರ ಪೊಲೀಸರು ನನ್ನನ್ನ ಆ ಮನೆಗೆ ಕರೆಸಿ ಬೀಗ ಒಡೆದಿರುವ ಬಗ್ಗೆ ಮಾಹಿತಿ ಕೇಳಿ ಪಡೆದುಕೊಂಡರು ಎಂದು ರಫಿ ಶೇಖ್ ಅಂದು ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ಮಾನವೀಯತೆಯ ಗೆಲುವು, ನನ್ನ ಧ್ವನಿ ಅಡಗಿಸೋ ಪ್ರಯತ್ನ ನಡೆದಿತ್ತು-ಕಂಗನಾ ರಣಾವತ್ ಮೊದಲ ಪ್ರತಿಕ್ರಿಯೆ
Advertisement
Advertisement
ಜೂನ್ 14ರಂದು ಸುಶಾಂತ್ ಮೃತದೇಹ ಮಂಬೈನ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮುಂಬೈ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆಗಸ್ಟ್ 19ರಂದು ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ. ಇದನ್ನೂ ಓದಿ: ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ- ಅಂಕಿತಾ ಲೋಖಂಡೆ ಪ್ರತಿಕ್ರಿಯೆ