ಬೆಂಗಳೂರು: ಒಟ್ಟು ಜೂನ್ ತಿಂಗಳಿನಲ್ಲಿ ಕರ್ನಾಟಕಕ್ಕೆ 58.71 ಲಕ್ಷ ಡೋಸ್ ಲಸಿಕೆ ಪೂರೈಕೆಯಾಗಲಿದೆ.
ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ. ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
Advertisement
ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ.
ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ. pic.twitter.com/WXvg3bOht9
— Dr Sudhakar K (@mla_sudhakar) June 3, 2021
Advertisement
ಜೂನ್ 30ರ ವೇಳೆಗೆ ಕೇಂದ್ರದಿಂದ 37,60,610 ಕೋವಿಶೀಲ್ಡ್, 7,40,190 ಕೊವಾಕ್ಸಿನ್ ಸೇರಿದಂತೆ ಒಟ್ಟು 45,00,800 ಲಸಿಕೆ ಸಿಗಲಿದೆ. ರಾಜ್ಯ ಸರ್ಕಾರ 10,86,080 ಕೋವಿಶೀಲ್ಡ್ ಮತ್ತು 2,84,760 ಕೊವಾಕ್ಸಿನ್ ಸೇರಿದಂತೆ ಒಟ್ಟು 13,70,840 ಲಸಿಕೆಯನ್ನು ಖರೀದಿ ಮಾಡಿದೆ.