ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ ಪಿ ಹನುಮಂತರಾಯ ಬೆಳ್ಳಂಬೆಳಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಅಭಿಯಾನ ನಡೆಸಿದರು. ತಹಶೀಲ್ದಾರ್ ಗಿರೀಶ್ ಲಾಠಿ ಹಿಡಿದು ಮಾರುಕಟ್ಟೆ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಕೆಲಸವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು. ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದರು. ಸಾಕಷ್ಟು ಬಾರಿ ಮನವಿ ಮಾಡಿದರು ಜನರು ಮಾತ್ರ ಜಾಗೃತರಾಗುತ್ತಿಲ್ಲ. ಹಲವು ಬಾರಿ ಮಾಸ್ಕ್ ಅಭಿಮಾನ ಮಾಡಿ ಉಚಿತವಾಗಿ ಸಂಘಸಂಸ್ಥೆಗಳು ಅಭಿಯಾನ ಮಾಡಿದರು ಜನರು ಮಾಸ್ಕ್ ಹಾಕಿಕೊಳ್ಳದೆ ಹೊರ ಬರುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಫೀಲ್ಡ್ ಗೆ ಇಳಿದು ಮಾಸ್ಕ್ ಅಭಿಯಾನ ಶುರು ಮಾಡಿದರು.
Advertisement
Advertisement
ಜನರು ಹೀಗೆ ಮಾಸ್ಕ್ ಹಾಕಿಕೊಳ್ಳದೆ ಬೀಕಾಬಿಟ್ಟಿ ತಿರುಗಾಡಿದರೆ ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡುತ್ತೇವೆ. ತಳ್ಳು ಗಾಡಿಗಳ ಮೂಲಕ ಮನೆಗಳ ಮುಂದೆ ತರಕಾರಿ ಕೊಳ್ಳುವ ವ್ಯವಸ್ಥೆ ಮಾಡುತ್ತೇವೆ ಎಂದು ಎಸ್ ಪಿ ಹನುಮಂತರಾಯ ಜನರಿಗೆ ಎಚ್ಚರಿಕೆ ನೀಡಿದರು.
Advertisement
Advertisement
ರಾಜ್ಯದಲ್ಲಿ ದಿನದಿಂದ ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿದ್ದು, ದಾವಣಗೆರೆಯಲ್ಲಿ ಕೂಡ ಪ್ರತಿನಿತ್ಯ ನೂರಾರು ಪಾಸಿಟಿವ್ ಕೇಸ್ ಗಳು ದಾಖಲಾಗುತ್ತಿದ್ದರು ಜನರು ಮಾತ್ರ ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.