ಬೆಂಗಳೂರು: ಜಿಮ್ ಬಂದ್ ಆದೇಶವನ್ನ ಸರ್ಕಾರ ಹಿಂಪಡೆದಿದ್ದು, ಕೆಲವು ಷರತ್ತುಗಳನ್ನ ವಿಧಿಸಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
Advertisement
ಜಿಮ್ ಕೇಂದ್ರಗಳಿಗೆ ಷರತ್ತುಬದ್ಧ ನಿಯಮಗಳೊಂದಿಗೆ ಸರ್ಕಾರ ಜಿಮ್ ತೆರೆಯಲು ಅನುಮತಿ ನೀಡಿದೆ. ಜಿಮ್, ಫಿಟ್ನೆಸ್ ಕೇಂದ್ರಗಳ ಮನವಿಗೂ ಸ್ಪಂದಿಸಿದ ಸರ್ಕಾರ ಕೆಲವು ಮಾರ್ಗಸೂಚಿಯನ್ನು ಹೊರಡಿಸಿ ಜಿಮ್ ತೆರೆಯಲು ಅನುಮತಿ ನೀಡಿದೆ. ಸಿಎಸ್ ರವಿಕುಮಾರ್ ಮಾರ್ಗಸೂಚಿ ಇರುವ ಆದೇಶವನ್ನು ಹೊರಡಿಸಿದ್ದಾರೆ.
Advertisement
ಜಿಮ್ ತೆರೆಯಲು ಇರುವ ಮಾರ್ಗಸೂಚಿಗಳು
Advertisement
* ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ಕಲ್ಪಿಸಬೇಕು.
* ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ.
* ಜಿಮ್ನಲ್ಲಿ ಪ್ರತೀ ಸಲ ಬಳಕೆ ಮಾಡಿದ ಬಳಿಕ ಜಿಮ್ ಸಲಕರಣೆಗಳನ್ನು ಸ್ಯಾನಿಟೈಸ್ ಮಾಡಬೇಕು.
* ನಿಯಮ ಉಲ್ಲಂಘಿಸಿದರೆ ಜಿಮ್ ಬಂದ್ ಮಾಡಿಸುವ ಎಚ್ಚರಿಕೆಯನ್ನು ನೀಡಿದೆ.
Advertisement
ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ಕೊರೊನಾ ಕುರಿತಾದ ಕೆಲವು ಮುಂಜಾಗೃತಾ ಕ್ರಮಗಳ ಪಾಲನೆಗಾಗಿ ಜಿಮ್ನ್ನು ಕೆಲ ದಿನ ಮುಚ್ಚುವಂತೆ ಹೇಳಿತ್ತು. ಇದೀಗ ಜಿಮ್ ಮಾಲೀಕರ ಮನವಿಗೆ ಸ್ಪಂದಿಸಿರುವ ಸರ್ಕಾರ ಆರಂಭಕ್ಕೆ ಕೆಲವು ಷರತ್ತಿನ ಮೇಲೆ ಗ್ರೀನ್ ಸಿಗ್ನಲ್ ನೀಡಿದೆ.