ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಸಮೀಪದ ಸಿಂಗಸಂದ್ರ ಎಂಬಲ್ಲಿ ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಹೊಡೆದು ಕೊಂದ ಘಟನೆ ನಡೆದಿದೆ.
ಜೆಎಸ್ಎಸ್ ಲೇಔಟ್ ನಿವಾಸಿ ಯೋಗೇಶ್ ತನ್ನ ಸಂಬಂಧಿಕರ ಅಂತ್ಯಸಂಸ್ಕಾರ ಮುಗಿಸಿ ಗೆಳೆಯರೊಂದಿಗೆ ಶನಿವಾರ ರಾತ್ರಿ ಕುಡಿಯಲು ತೆರಳಿದ್ದಾನೆ. ಹೀಗೆ ಎಲ್ಲರೂ ಸಿಂಗಸಂದ್ರದ ತೆರೆದ ಜಾಗದಲ್ಲಿ ಕುಳಿತು ಎಣ್ಣೆ ಹೊಡದಿದ್ದಾರೆ.
Advertisement
Advertisement
ಈ ವೇಳೆ ಜಾಸ್ತಿ ಕುಡಿಯಬೇಡ ಎಂದು ಗೆಳೆಯನೊಬ್ಬ ಯೋಗೀಶ್ ನನ್ನು ತಡೆದಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಸಣ್ಣ ಜಗಳವಾಗಿದೆ. ಇದಾದ ಬಳಿಕ ಅಂದರೆ 9 ಗಂಟೆ ಸುಮಾರಿಗೆ ಯೋಗೀಶ್ ಮತ್ತೆ ಮದ್ಯ ತರಲು ಹಣ ಕೊಟ್ಟಿದ್ದಾನೆ. ಪರಿಣಾಮ ಮತ್ತೆ ಗೆಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
Advertisement
ಯೋಗೀಶ್ ವರ್ತನೆಯಿಂದ ಸಿಟ್ಟಿಗೆದ್ದ ಗೆಳೆಯ ಅಲ್ಲಿಯೇ ಇದ್ದ ಮಾರಕಾಸ್ತ್ರದಿಂದ ಆತನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.