– 5 ಕೋಟಿ ಡೀಲ್, ಕೇಳಿದ್ಯಾರು? ಕೊಟ್ಟಿದ್ಯಾರು?
ಮೈಸೂರು: ಮಾಜಿ ಸಚಿವ, ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಈ ಕೇಸ್ ನಲ್ಲಿ 5 ಕೊಟಿ ರೂಪಾಯಿಯ ಡೀಲ್ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಡೀಲ್ ನಡೆದಿದ್ದು, ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ರಾಜೀನಾಮೆ ತೆಗೆದುಕೊಳ್ಳಲು ಈ ಡ್ರಾಮಾ ಮಾಡಲಾಯ್ತು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವ್ಯಾಖ್ಯಾನ ಸಹ ನೀಡಲಾಗಿದೆ. ಆ ಮಂತ್ರಿಯ ರಾಜೀನಾಮೆ ಕೊಡಿಸೋದು ಈ ಪ್ರಕರಣದ ಮೂಲ ಉದ್ದೇಶವಾಗಿತ್ತು ಮತ್ತು ಅದರಲ್ಲಿ ಸಫಲರೂ ಆಗಿದ್ದಾರೆ. ಆ ಹೆಣ್ಮಗಳು ಮತ್ತು ಮೂಲ ಮಂತ್ರಿ ಇಬ್ಬರೇ ಸೇರಿಕೊಂಡು ಈ ವೀಡಿಯೋ ಮಾಡಿಕೊಂಡಿರೋದು ಕಾಣುತ್ತದೆ. ಆದ್ರೆ ವೀಡಿಯೋ ಹೇಗೆ ಹೊರ ಬಂದಿದೆ ಎಂಬುದರ ಬಗ್ಗೆ ಗೊತ್ತಿಲ್ಲ.
Advertisement
Advertisement
ಸಿಡಿ ಇದೆ ಅಂತ ಹೇಳಿರುವ ವ್ಯಕ್ತಿಯನ್ನು ಮೊದಲು ಅರೆಸ್ಟ್ ಮಾಡಬೇಕು. ಯಾವನೋ ಮಾಧ್ಯಮಗಳ ಮುಂದೆ 4 ಸಿಡಿ ಇದೆ ಅಂತ ಹೇಳ್ತಾನೆ. ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡೋರು ಹೆಚ್ಚಾಗಿದ್ದಾರೆ. ಖಾಸಗಿ ಜೀವನವನ್ನ ಸಾರ್ವಜನಿಕವಾಗಿ ತರೋದು ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಹಾಗಾಗಿ ಸಿಡಿ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡೋರನ್ನ ಮೊದಲು ಬಂಧಿಸಬೇಕಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಸಲೀಲೆ ಕೇಸ್ – ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ಗೆ ಚಿಂತನೆ
Advertisement
Advertisement
ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ. ಅವನ ಬಳಿ ಸಿಡಿ ಹೇಗೆ ಬಂತು? ಅವನೇ ಈ ವೀಡಿಯೋ ಮಾಡಿದ್ನಾ ಅನ್ನೋದು ಮೊದಲು ಗೊತ್ತಾಗಬೇಕಿದ್ದು, ಸರ್ಕಾರ ಮೊದಲು ಆ ವ್ಯಕ್ತಿಯನ್ನ ಬಂಧಿಸಿ ಪ್ರಕರಣದ ಮೂಲ ಪತ್ತೆ ಮಾಡಬೇಕಿದೆ. ಮೂರು ದಿನಗಳಿಂದ ಹರಿದಾಡುತ್ತಿರುವ ವೀಡಿಯೋದಲ್ಲಿ 5 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಬ್ಲ್ಯಾಕ್ಮೇಲ್ ವ್ಯವಹಾರದಲ್ಲಿ ಕಪ್ಪು ಹಣ ಹರಿದಾಡುತ್ತಿದೆ ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಇದನ್ನೂ ಓದಿ: ಜಾರಕಿಹೊಳಿ ಕೇಸ್ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್?
ಸಿಡಿ ಇಟ್ಕೊಂಡು ಒಬ್ಬರು ಮಂತ್ರಿ ಆಗಿದ್ದಾರೆ ಅಂತ ಬಿಜೆಪಿ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಈ ರೀತಿ ಸಿಡಿ ಇಟ್ಕೊಂಡು ರಾಜಕಾರಣ ಮಾಡೋದು ಒಳ್ಳೆಯದಲ್ಲ. ರಾಜಕಾರಣ ತುಂಬಾ ಕಲುಷಿತವಾಗಿದೆ. ದೊಡ್ಡ ದೊಡ್ಡವರ ಹೆಸರು ಸರ್ಕಾರದ ತನಿಖೆಯಲ್ಲಿ ಹೊರ ಬರಲಿ ಎಂದರು. ಇದನ್ನೂ ಓದಿ: ಮನುಷ್ಯ ಅಂದ್ಮೇಲೆ ಕೆಲ ವೀಕ್ನೆಸ್ಗಳು ಇರ್ತವೆ, ಅದನ್ನೇ ಬಂಡವಾಳ ಮಾಡ್ಕೊಳ್ಳೋದು ಸರಿಯಲ್ಲ: ರಾಜೂ ಗೌಡ