ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಿಡಿ ಸಂಬಂಧ ಆ ವ್ಯಕ್ತಿಯ ಧ್ವನಿ ಪರೀಕ್ಷೆ ನಡೆಸಲಾಗುತ್ತಿದೆ.
ವಿಡೀಯೋದಲ್ಲಿರುವ ಹಿನ್ನೆಲೆ ಧ್ವನಿ ಚಿಕ್ಕಮಗಳೂರು ವ್ಯಕ್ತಿಯದ್ದು ಎನ್ನುವ ಶಂಕೆ ವ್ಯಕ್ತವಾಗಿದ್ದರಿಂದ 10 ನಿಮಿಷಗಳ ಧ್ವನಿಯನ್ನು ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಧ್ವನಿ ಪರೀಕ್ಷೆಯಿಂದ ಜಾರಕಿಹೊಳಿ ಸಿಡಿ ಸತ್ಯ ಹೊರಬರುತ್ತಾ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ವೀಡೀಯೋದಲ್ಲಿರುವ ಆ ವ್ಯಕ್ತಿಯ ಹಿನ್ನೆಲೆಯಲ್ಲಿ ಧ್ವನಿಯ ಪರೀಕ್ಷೆ ನಡೆಸಲಾಗುತ್ತದೆ. ವೀಡಿಯೋ ಎಡಿಟಿಂಗ್ ವೇಳೆ ಹಿನ್ನೆಲೆ ಧ್ವನಿ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್ಎಸ್ಎಲ್ ಮೂಲಕ ಸಿಡಿಕೋರನ ಧ್ವನಿ ಪರೀಕ್ಷೆ ನಡೆಸಲಾಗುತ್ತಿದೆ.
Advertisement
ಜಾರಕಿಹೊಳಿ ಸಿಡಿಯಲ್ಲಿದ್ದ ಆ ಧ್ವನಿಗೆ ಆ ವ್ಯಕ್ತಿಗೆ ಕಂಟಕ ಎದುರಾಗಲಿದೆ. ಸಿಡಿಕೋರನ ಆ ಮೂಲ ಧ್ವನಿಗೂ ವೀಡಿಯೋದಲ್ಲಿರುವ ಧ್ವನಿಗೂ ಸಾಮ್ಯತೆ ಇದೆಯಾ ಅಥವಾ ವಿಧಿವಿಜ್ಞಾನ ಪ್ರಯೋಗ ವೇಳೆ ಹಿನ್ನೆಲೆ ಧ್ವನಿಗೂ-ಮೂಲ ಧ್ವನಿಗೂ ಸಾಮ್ಯತೆ ಇದೆಯಾ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮೂಲದ ‘ಆ’ ಸಿಡಿಕೋರನ ಬಂಧನವಾಗುವ ಸಾಧ್ಯತೆ ಇದೆ.