– ಇವರ ಕಿರುಕುಳ ಹೇಗೆ ಇರುತ್ತೆ ನನಗೂ ಗೊತ್ತಿದೆ
– ಬಿಜೆಪಿಯಲ್ಲಿ ಇರೋರೆಲ್ಲ ಪರಿಶುದ್ಧರಾ?
ಬೆಂಗಳೂರು: ಶಾಸಕರಾದ ಜಮೀರ್ ಅಹ್ಮದ್ ಖಾನ್ ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿಯೇ ಎದುರಿಸುತ್ತಾರೆ. ಕಾನೂನು ಪ್ರಕಾರ ಎದುರಿಸಲು ಶಾಸಜಕರು ಸಮರ್ಥರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಇಡಿ ದಾಳಿ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ವಿಧಾನಸೌಧದಲ್ಲಿಯೇ ಶ್ರೀನಿವಾಸ್ ಗೌಡರು ಮೂವತ್ತು ಕೋಟಿಯ ಆರೋಪಗಳನ್ನು ಮಾಡಿದರು. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ 9 ಕೋಟಿ ತಂದು ಸರ್ಕಾರ ರಚನೆ ಮಾಡಿದರು ಅಂತ ಅವರೇ ಹೇಳಿದ್ದರು. ಆದ್ರೆ ಇವರ ಮೇಲೆಲ್ಲ ದಾಳಿ ನಡೀತಾ? ಐಟಿ, ಎಸಿಬಿಯಲ್ಲಿ ಪ್ರಕರಣ ದಾಖಲಾಯ್ತಾ? ಆಪರೇಷನ್ ಕಮಲದ ವೇಳೆ ಯಾರ ಮೇಲೆ ದಾಳಿ ನಡೀತಾ? ಬಿಜೆಪಿಯಲ್ಲಿರೋರು ಪರಿಶುದ್ಧರಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
Advertisement
Advertisement
ಎರಡು ವರ್ಷದ ಹಿಂದೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೆ ಎಂದು ಜಮೀರ್ ಹೇಳಿದ್ದರು. ಈಗ ದಾಳಿ ನಡೆಯುವ ಅವಶ್ಯಕತೆ ಇರಲಿಲ್ಲ. ಈಗ ಕಿರುಕುಳ ನೀಡುತ್ತಿರೋದು ಯಾಕೆ? ಈ ಕಿರುಕುಳ ಹೇಗೆ ಇರುತ್ತೆ ನಂಗೂ ಗೊತ್ತಿದೆ. ಈಗ ತೊಂದರೆ ಕೊಡುತ್ತಿರುವುದು ಸರಿ ಇಲ್ಲ. ಯಾರ ಅನಕೂಲಕ್ಕೆ ಈ ದಾಳಿ ನಡೆದಿದೆ ಗೊತ್ತಿಲ್ಲ ಎಂದರು. ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ಹಿಂದೇಟು ಹಾಕಿದರು.
Advertisement
Advertisement
ಜಮೀರ್ ಅಹ್ಮದ್ ಅವರ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರುವ ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಇಡಿ ದಾಳಿ ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!