ಮಡಿಕೇರಿ: ಜನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.
Advertisement
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿ, ತೆರಿಗೆ ಮತ್ತು ಸೆಸ್ ಮಧ್ಯೆ ಇರುವ ವ್ಯತ್ಯಾಸಗಳನ್ನು ಜನರು ಮೊದಲು ತಿಳಿದುಕೊಳ್ಳಬೇಕು. ತೆರಿಗೆ ಹಣವನ್ನು ಯಾವುದಕ್ಕೆ ಬೇಕಾದರೂ ಬಳಕೆ ಮಾಡಬಹುದು. ಅದರೆ ಸೆಸ್ ಹಣವನ್ನು ಯಾವುದಕ್ಕೆ ಸಂಗ್ರಹ ಮಾಡುತ್ತಿರೋ ಅದಕ್ಕೆ ಮಾತ್ರ ಅ ಹಣವನ್ನು ಬಳಕೆಮಾಡಲಾಗುತ್ತದೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕೊಡುತ್ತಿರುವುದು ಈ ಸೆಸ್ ಹಣ ಸಂಗ್ರಹದಿಂದಲೇ. ಕೃಷಿ ಸೆಸ್ ಅನ್ನು ಕೃಷಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
Advertisement
Advertisement
ಇನ್ನೂ ರಾಜ್ಯ ಸರ್ಕಾರ ಡಕೋಟ ಎಕ್ಸ್ಪ್ರೆಸ್ ಎಂದಿದ್ದ ಸಿದ್ದರಾಮಯ್ಯ ಕುರಿತು ಮಾತಾನಾಡಿದ ಡಿವಿ ಸಿದ್ದರಾಮಯ್ಯ ಅವರಿಗೆ ಶಬ್ಧ ಪ್ರಯೋಗ ಗೊತ್ತಿಲ್ಲ ಅವರು ಹತ್ತು ಬಜೆಟ್ ಗಳನ್ನು ಮಂಡನೆ ಮಾಡಿದವರು ಆದರೂ ಅವರಿಗೆ ಪದ ಪ್ರಯೋಗ ಗೊತ್ತಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
Advertisement
ತೆರಿಗೆ ವಸ್ತುವಿನ ಮೇಲೆ ತೆರಿಗೆ ಹಾಕಿದರೆ ಆ ವಸ್ತುವಿನಿಂದ ಬಂದ ತೆರಿಗೆಯನ್ನು ಯಾವುದೇ ಯೋಜನೆಗಳಿಗೆ ಬಳಸಬಹುದು. ಆದರೆ ಸೆಸ್ ಹಾಕಿದರೆ ಯಾವ ಉದ್ದೇಶವನ್ನು ಇಟ್ಟುಕೊಂಡು ಸೆಸ್ ಜಾರಿ ಆಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತದೆ.