ಜನಪ್ರತಿನಿಧಿಗಳ ಮೇಲೆ ಐಟಿ, ಇಡಿ ದಾಳಿ ಆಗಲಿ ಬಿಡಿ: ಹೊರಟ್ಟಿ

Public TV
1 Min Read
dvg horatti

ದಾವಣಗೆರೆ: ಜನಪ್ರತಿನಿಧಿಗಳ ಮೇಲೆ ಐಟಿ, ಇಡಿ ದಾಳಿ ಆಗಲಿ ಬಿಡಿ, ಯಾಕೆ ಆಗಬಾರದು? ನೀವು ಬೇಕಾದ್ದು ಮಾಡುತ್ತೇವೆ ಎಂದರೆ ಈಗ ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿಯಾದ ಕುರಿತು ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ದಾಳಿ ಮಾಡಿದ್ರೆ ಏನೂ ತೊಂದರೆ ಇಲ್ಲ. ನಮ್ಮ ಮನೆ ಮೇಲೂ ದಾಳಿ ಮಾಡಲಿ ಯಾವುದೇ ತಕರಾರಿಲ್ಲ. ನಾವು ಮಾಡಿದ್ದೆಲ್ಲ ಸರಿ ಎನ್ನುವವರ ಮೇಲೆ ದಾಳಿ ನಡೆದಿದೆ. ದಾಳಿ ಮಾಡುವವರು ಯೋಗ್ಯವಾದವರ ಮೇಲೆ ದಾಳಿ ಮಾಡಲಿ ಎಂದರು. ಇದನ್ನೂ ಓದಿ: ಜಮೀರ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಡಿ.ಕೆ.ಸುರೇಶ್

ಶಾಲೆಗಳನ್ನು ಪ್ರಾರಂಭಿಸುವಂತೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಅಧಿಕಾರಿಗಳು ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಕೋವಿಡ್ ನಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿವೆ. ಶಾಲೆಗಳು ಇದೇ ರೀತಿ ಬಂದ್ ಅಗಲಿ ಎನ್ನುವ ಮನೋಭಾವಕ್ಕೆ ಮಕ್ಕಳು ಬಂದಿದ್ದಾರೆ. ಶಾಲೆಗಳನ್ನು ತೆರೆದು ಸಾಮಾಜಿಕ ಅಂತರ, ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕಾಗಿದ್ದು, ಒಂದು ದಿನ ಒಂದೊಂದು ತರಗತಿಗಳಿಗೆ ಮಾತ್ರ ಅವಕಾಶ ನೀಡಿದರೆ ಒಳ್ಳೆಯದು ಎಂದರು. ಇದನ್ನೂ ಓದಿ: ಜಮೀರ್ ಆದಾಯ 10 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಕೋವಿಡ್ ನಿಂದ ಸಾವನ್ನಪ್ಪಿದ ಶಿಕ್ಷಕರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗಿದ್ದು, ಆಕಸ್ಮಿಕವಾಗಿ ಕೋವಿಡ್ ನಿಂದ ಸಾವನ್ನಪ್ಪಿದ ಶಿಕ್ಷಕರಿಗೆ 5 ಲಕ್ಷ ರೂ. ಕೊಡಿಸುವ ಕೆಲಸ ಮಾಡಲಾಗಿದೆ.

ಮುಖ್ಯಮಂತ್ರಿ ಸಂಪುಟ ರಚನೆ ಮಾಡಲು ಅವರದ್ದೇಯಾದ ತೊಂದರೆ, ಸಮಸ್ಯೆಗಳಿವೆ. ಸಭಾಪತಿಯಾಗಿ ನಾನು ಈ ಬಗ್ಗೆ ಮಾತನಾಡಲು ಬರುವುದಿಲ್ಲ. ಸಿಎಂ ಬೊಮ್ಮಯಿ ಮಾಜಿ ಪ್ರಧಾನಿ ದೇವೇಗೌಡ ಭೇಟಿ ಮಾಡಿರುವುದು ಅವರ ವೈಯಕ್ತಿಕ ಎಂದರು.

Share This Article