ಜನನಿಬಿಡ ಪ್ರದೇಶದಲ್ಲಿ ಅಟ್ಟಾಡಿಸಿ ಚಾಕುವಿನಿಂದ ಇರಿದು ಯುವಕನ ಕೊಲೆ

– ಸ್ಯಾನಿಟೈಸರ್ ಮಾರಾಟ ಮಾಡ್ತಿದ್ದ ಮೃತ ಯುವಕ

ಹುಬ್ಬಳ್ಳಿ: ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ದೇಶಪಾಂಡೆ ನಗರದ ಸಮೀಪವಿರುವ ಕೃಷ್ಣ ಕಲ್ಯಾಣ ಮಂಟಪದ ಬಳಿ ನಡೆದಿದೆ.

ಕೃಷ್ಣ ನಗರದ ನಿವಾಸಿ ಲೋಕೇಶ್ ಕಡೆಮನಿ ಕೊಲೆಯಾದ ಯುವಕ. ಜನನಿಬಿಡ ಪ್ರದೇಶದಲ್ಲಿ ನಾಲ್ಕೈದು ಯುವಕರ ಗುಂಪು ಬೈಕಿನಲ್ಲಿ ಬಂದಿದ್ದಾರೆ. ನಂತರ ಅಟ್ಟಾಡಿಸಿ ಚಾಕುವಿನಿಂದ ಇರಿದು ಲೋಕೇಶ್ ಕಡೆಮನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

- Advertisement -

ಮೃತ ಯುವಕ ಇತ್ತೀಚಿಗೆ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದನು. ಆದರೆ ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಹಳೆ ವೈಷಮ್ಯ ಅಥವಾ ಕ್ಷುಲಕ ಕಾರಣಕ್ಕೆ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

- Advertisement -

ಸದ್ಯಕ್ಕೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಯುವಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -