– ಸಚಿವರಲ್ಲಿ ಗೊಂದಲವೋ, ಗೊಂದಲ
ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರೋ 2 ವಾರಗಳ ಜನತಾ ಲಾಕ್ಡೌನ್ ಜಾರಿಯಾಗಿ ಒಂದು ವಾರ ಕಳೀತಿದೆ. ಆದಾಗ್ಯೂ ಕೊರೊನಾ ಕಂಟ್ರೋಲ್ಗೇ ಬಂದಿಲ್ಲ. ಬದಲಿಗೆ ಜನತಾ ಕರ್ಫ್ಯೂಗೆ ಮುನ್ನ ಇದ್ದ ಕೇಸ್ಗಳಿಗಿಂತಲೂ ಜನತಾ ಕರ್ಫ್ಯೂ ಘೋಷಿಸಿದ ಮೇಲೇ ಹೆಚ್ಚಾಗಿರೋದು ಎಂಥಹವರಿಗೂ ಸ್ಪಷ್ಟವಾಗಿ ಗೋಚರಿಸ್ತಿದೆ.
Advertisement
ಈ ಮಧ್ಯೆ ಜನತಾ ಲಾಕ್ಡೌನ್ ಬಗ್ಗೆ ಸಚಿವರಲ್ಲೇ ಗೊಂದಲ ಇದೆ. ಆರೋಗ್ಯ ಸಚಿವ ಸುಧಾಕರ್ ಅವರೇ ಖುದ್ದು ಜನತಾ ಲಾಕ್ಡೌನ್ ವಿಫಲವಾಗಿದೆ ಅಂತ ಹೇಳಿದ್ದಾರೆ. ಆದರೆ ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಮಾತ್ರ, ಜನತಾ ಲಾಕ್ಡೌನ್ 100ಕ್ಕೆ 100ರಷ್ಟು ಯಶಸ್ವಿ ಆಗಿದೆ ಅಂದಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಸರ್ಕಾರ ಮೀನಾಮೇಷ ಮಾಡ್ತಿರೋ ಹೊತ್ತಲ್ಲೇ ಕಿಲ್ಲರ್ ಕೊರೊನಾ ಕಂಟ್ರೋಲ್ಗೆ ಲಾಕ್ಡೌನ್ ಅಸ್ತ್ರವೇ ಪರಿಣಾಮಕಾರಿ ಅಂತ ಲಾಕ್ಡೌನ್ ಒತ್ತಡ ಹೆಚ್ಚಾಗ್ತಿದೆ. ಆರೋಗ್ಯ ಸಚಿವ ಸುಧಾಕರ್ ಅವರು ಸಂಪೂರ್ಣ ಲಾಕ್ಡೌನ್ ಸುಳಿವು ನೀಡಿದ್ದಾರೆ.
Advertisement
Advertisement
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ ಆಗಿದೆ. ಮುಂಬೈನಲ್ಲೂ ಲಾಕ್ಡೌನ್ನಿಂದಲೇ ಕೇಸ್ ಕಡಿಮೆ ಆಗಿದೆ. ಹಾಗಾಗಿ, ಸಂಪೂರ್ಣ ಲಾಕ್ಡೌನ್ ಬಗ್ಗೆ ಯೋಚನೆ ಮಾಡಲಿ ಅಂದಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ, ಜನತಾ ಲಾಕ್ಡೌನ್ನಿಂದ ಸೋಂಕು ನಿಯಂತ್ರಣ ಆಗ್ತಿಲ್ಲ. ಸಂಪೂರ್ಣ ಲಾಕ್ಡೌನ್ ಮಾಡಿ ಅಂತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Advertisement
ಸಚಿವೆ ಶಶಿಕಲಾ ಜೊಲ್ಲೆ ಕೂಡ 10 ರಿಂದ 15 ದಿನ ಸಂಪೂರ್ಣ ಲಾಕ್ ಡೌನ್ ಮಾಡಿದರೆ ಒಳ್ಳೆಯದು ಅಂದಿದ್ದಾರೆ. ಇದೆಲ್ಲದರ ಮಧ್ಯೆ, ಬೆಂಗಳೂರಿನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಕಠಿಣ ಲಾಕ್ಡೌನ್ ಅನಿವಾರ್ಯ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಹ ಲಾಕ್ಡೌನ್ ಹೇರುವಂತೆ ಸರ್ಕಾರಕ್ಕೆ ತಿಳಿಸಿದ್ದಾರೆ.