ಸಿಡ್ನಿ: ಆರ್ಥಿಕ ಸಮಸ್ಯೆಗಳ ಕಾರಣದಿಂದ ಅಡಲ್ಟ್ ಸಿನಿಮಾ ಸ್ಟಾರ್ ಆಗಿ ಬದಲಾಗಿರುವ ಕಾರ್ ರೇಸರ್ ರೆನೀ ಗ್ರೇಸಿ ಭಾರತೀಯರ ವಿರುದ್ಧ ಗರಂ ಆಗಿದ್ದಾಳೆ. ನಟಿಯ ಆನ್ಲೈನ್ ಅಕೌಂಟ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಬಳಿಕ ಫೇಕ್ ಖಾತೆ ಸೃಷ್ಟಿಸಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವುದೇ ರೆನೀ ಗ್ರೇಸಿ ಗರಂ ಆಗಲು ಕಾರಣವಾಗಿದೆ.
Advertisement
ಮಾಜಿ ಸೂಪರ್ ಕಾರ್ ರೇಸರ್ ಆಗಿರುವ ರೆನೀ 14 ವರ್ಷ ವಯಸ್ಸಿನಲ್ಲೇ ಕಾರ್ ರೇಸರ್ ವೃತ್ತಿಗೆ ಕಾಲಿಟ್ಟಿದ್ದಳು. ಆ ಬಳಿಕ ವೃತ್ತಿ ಪರ ಕಾರ್ ರೇಸರ್ ಆಗಿ ಗುರುತಿಸಿಕೊಂಡಿದ್ದ ರೆನೀ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅಡಲ್ಟ್ ಸಿನಿಮಾ ನಟಿಯಾಗಿ ಬದಲಾಗಿದ್ದಳು. 2017ರ ಬಳಿಕ ಸಾಕಷ್ಟು ರೇಸ್ಗಳಲ್ಲಿ ಸೋಲು ಕಂಡಿದ್ದು ಆರ್ಥಿಕ ಸಮಸ್ಯೆಗಳಿಗೆ ಗುರಿ ಮಾಡಿತ್ತು. ಆ ಬಳಿಕ ಕಾರ್ ಯಾರ್ಡ್ ಒಂದರಲ್ಲಿ ಕೆಲಸ ಆರಂಭಿಸಿದ್ದ ರೆನೀ, ‘ಓನ್ಲಿಫ್ಯಾನ್ಸ್’ ಎಂಬ ಅಡಲ್ಟ್ ವೆಬ್ಸೈಟ್ನೊಂದಿಗೆ ಒಪ್ಪಂದ ಮಾಡಿಕೊಂಡು ಅಡಲ್ಟ್ ಸ್ಟಾರ್ ಆಗಿ ಬದಲಾಗಿದ್ದಳು.
Advertisement
Advertisement
ವೆಬ್ಸೈಟ್ನಲ್ಲಿ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡುತ್ತಾ ರೆನೀ ಸಾಕಷ್ಟು ಹಣ ಗಳಿಸುತ್ತಿದ್ದಾಳೆ. ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ರೆನೀ ಕುರಿತು ಹಲವು ವರದಿಗಳು ಪ್ರಕಟವಾಗಿತ್ತು. ಆ ಬಳಿಕ ರೆನೀ ವಿಡಿಯೋಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲು ಆರಂಭಿಸಿದ್ದ ಕೆಲವರು, ವೆಬ್ಸೈಟ್ಗಳಲ್ಲಿ ನಕಲಿ ಖಾತೆ ತೆರೆದು ಆಕೆಯ ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದರು. ಈ ಕುರಿತ ಮಾಹಿತಿ ತಿಳಿದ ರೆನೀ ನಕಲಿ ಖಾತೆ ಸೃಷ್ಟಿಯಾಗಿರುವುದು ಭಾರತೀಯರಿಂದ ಎಂಬುವುದು ತಿಳಿದ ಬಳಿಕ ಗರಂ ಆಗಿದ್ದಾಳೆ.
Advertisement
ಈ ಕುರಿತು ವೆಬ್ಸೈಟ್ನಲ್ಲಿ ಮಾತನಾಡಿರೋ ರೆನೀ, ನಾನು ಅಪ್ಲೋಡ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಕಾಪಿರೈಟ್ ಕಂಟೆಂಟ್ ಹೊಂದಿದೆ. ಆ ವಿಡಿಯೋಗಳ ಮೇಲೆ ನನಗೆ ಮಾತ್ರ ಹಕ್ಕಿದೆ. ಆದರೆ ನೀವು ಅವುಗಳನ್ನು ಬಳಿಸಿಕೊಂಡು ನಕಲಿ ಖಾತೆಗಳಲ್ಲಿ ಅಪ್ಲೋಡ್ ಮಾಡಿರುವುದು ಕಾನೂನಿನ ಅನ್ವಯ ತಪ್ಪು. ನಿಮ್ಮನ್ನು ನನ್ನ ಪೇಜ್ಗೆ ಬರುವಂತೆ ನಾನು ಕರೆದಿಲ್ಲ. ಇಂದಿಗೂ ನನಗೆ ಭಾರತೀಯರು ಎಂದರೇ ಇಷ್ಟ. ಆದರೆ ಈಗ ನನ್ನ ಪೇಜ್ನಿಂದ ಭಾರತೀಯರು ಹೊರ ಹೋಗಿ ಎಂದು ರೆನೀ ಹೇಳಿದ್ದಾಳೆ.
ಇತ್ತೀಚೆಗಷ್ಟೇ ತಮ್ಮ ಅಡಲ್ಟ್ ವೃತ್ತಿ ಜೀವನದ ಕುರಿತು ಮಾತನಾಡಿದ್ದ ರೆನೀ, ಸೂಪರ್ ಕಾರ್ ರೇಸರ್ ಆಗಿದ್ದ ನಾನು ಅಡಲ್ಟ್ ಇಂಡಸ್ಟ್ರಿ ಬಂದಿದ್ದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ. ಈ ಹೊಸ ವೃತ್ತಿಗೆ ಕುಟುಂಬದ ಪೂರ್ಣ ಸಹಕಾರವಿದೆ. ಹೀಗಾಗಿ ಅಡಲ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಜೊತೆಗೆ ನನಗೆ ಸೂಪರ್ ಕಾರ್ ರೇಸಿಂಗ್ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಜೊತೆಗೆ ಆರ್ಥಿಕ ಸಮಸ್ಯೆಯಿಂದ ತನ್ನ ವೃತ್ತಿಯನ್ನು ಈಗ ಬದಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಳು.
ಆಸ್ಟ್ರೇಲಿಯಾದ ಮೊದಲ ಮಹಿಳಾ ಫುಲ್ ಟೈಮ್ ಕಾರ್ ರೇಸರ್ ಆಗಿದ್ದ ರೆನೀ, ಅಲ್ಲಿ ಹೆಚ್ಚು ಹಣ ಸಿಗಲ್ಲ ಎಂಬ ಕಾರಣಕ್ಕೆ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅಲ್ಲದೇ ಇನ್ನೂ ಮುಂದಿನ ತನ್ನ ವೃತ್ತಿ ಜೀವನವನ್ನು ನೀಲಿ ಚಿತ್ರತಾರೆಯಾಗಿ ಕಳೆಯಲು ತೀರ್ಮಾನಿದ್ದಾಳೆ. ಜನ ನಾವು ಏನೂ ಮಾಡುತ್ತಿದ್ದೇವೆ ಎಂಬದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವು ಏನೂ ಸಾಧನೆ ಮಾಡಿದ್ದೇವೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ರೆನೀ ಹೇಳಿದ್ದಳು.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಸೂಪರ್-2 ಕಾರ್ ರೇಸಿಂಗ್ನಲ್ಲಿ ಒಟ್ಟು 17 ರೇಸ್ನಲ್ಲಿ ಭಾಗವಹಿಸಿದ್ದ ರೆನೀ ಕೇವಲ ಒಂದು ಬಾರಿ ಮಾತ್ರ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಳು. ಈ ವಿಚಾರದ ಬಗ್ಗೆಯೂ ಮಾತನಾಡಿದ್ದ ರೆನೀ ಗ್ರೇಸಿ, ಕಾರ್ ರೇಸಿಂಗ್ನಲ್ಲಿ ನಾವು ನಮ್ಮ ಜೀವವನ್ನೇ ಪಣಕ್ಕೆ ಇಟ್ಟು ಕಾರನ್ನು ಓಡಿಸುತ್ತೇವೆ. ಅಲ್ಲಿ ಒಂದು ಸೆಕೆಂಡ್ ಕೂಡ ಲೆಕ್ಕಕ್ಕೆ ಬರುತ್ತದೆ. ಆದರೆ ಅಲ್ಲಿ ಹಣ ಗಳಿಸುವುದು ಬಹಳ ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಳು.
2014ರಲ್ಲಿ ನಡೆದ ಆಸ್ಟ್ರೇಲಿಯಾನ್ ಕಾರ್ ರೇಸಿಂಗ್ನಲ್ಲಿ ರೆನೀ ಗ್ರೇಸಿ ಮೊದಲು ಕಾರ್ ಓಡಿಸಿದ್ದಳು. ಈಗ ಸಂಪೂರ್ಣವಾಗಿ ನಾನು ಕಾರ್ ರೇಸ್ ಬಿಟ್ಟಿದ್ದು, ನನ್ನ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಗಳಿಸುತಿದ್ದೇನೆ. ನನಗೆ ಇನ್ನೂ ಮುಂದೆ ಜೀವನವಿದೆ. ನಾನೂ ಬೇರೆ ಕೆಲಸ ಮಾಡುತ್ತೇನೆ ಎಂದು ರೆನೀ ತಿಳಿಸಿದ್ದಳು.